ADVERTISEMENT

Sandalwood: ‘ಮಹಾನ್‌’ ಸಿನಿಮಾಗೆ ನಮ್ರತಾ ಗೌಡ ಪ್ರವೇಶ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 23:30 IST
Last Updated 4 ಸೆಪ್ಟೆಂಬರ್ 2025, 23:30 IST
ನಮ್ರತಾ ಗೌಡ
ನಮ್ರತಾ ಗೌಡ   

ವಿಜಯ ರಾಘವೇಂದ್ರ ನಾಯಕರಾಗಿ ನಟಿಸುತ್ತಿರುವ, ಪಿ.ಸಿ.ಶೇಖರ್ ನಿರ್ದೇಶನದ ‘ಮಹಾನ್‌’ ಚಿತ್ರದಲ್ಲಿ ನಮ್ರತಾ ಗೌಡ ನಟಿಸಲಿದ್ದಾರೆ. 

‘ನಾಗಿಣಿ’ ಧಾರಾವಾಹಿಯ ಮೂಲಕ ಖ್ಯಾತಿ ಪಡೆದ ನಮ್ರತಾ ಬಳಿಕ ‘ಬಿಗ್‌ಬಾಸ್’ ರಿಯಾಲಿಟಿ ಶೋದಲ್ಲಿ ಮಿಂಚಿದ್ದರು. ಆಕಾಶ್ ಪಿಕ್ಚರ್ಸ್ ಲಾಂಛನದಲ್ಲಿ ಪ್ರಕಾಶ್ ಬುದ್ದೂರು ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ನಟ ಮಿತ್ರ, ‘ರಂಗಿತರಂಗ’ ಖ್ಯಾತಿಯ ನಟಿ ರಾಧಿಕಾ ನಾರಾಯಣ್ ಅವರೂ ನಟಿಸುತ್ತಿದ್ದಾರೆ. 

‘ಸಿನಿಮಾದಲ್ಲಿ ನಟಿಸುವಂತೆ ನನಗೆ ಅನೇಕ ಸ್ನೇಹಿತರು ಒತ್ತಾಯಿಸುತ್ತಿದ್ದರು. ಒಳ್ಳೆಯ ಕಥೆಗಾಗಿ  ಕಾಯುತ್ತಿದ್ದೆ. ನಿರ್ದೇಶಕ ಪಿ.ಸಿ.ಶೇಖರ್ ಅವರು ಹೇಳಿದ ಈ ಕಥೆ ಮನಸ್ಸಿಗೆ ಹತ್ತಿರವಾಯಿತು. ರೈತರ ಬದುಕು ಬವಣೆಗಳ ಸುತ್ತ ಹೆಣೆದಿರುವ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ  ಮುಖ್ಯಭೂಮಿಕೆಯಲ್ಲಿದ್ದೇನೆ. ಅನುಭವಿ ಕಲಾವಿದರ ದೊಡ್ಡ ತಾರಾಬಳಗವೇ ಸಿನಿಮಾದಲ್ಲಿದ್ದು, ನೈಜತೆಗೆ ಹತ್ತಿರವಾಗಿರುವ ಕಥೆಯುಳ್ಳ ಚಿತ್ರದಲ್ಲಿ ‌ಅಭಿನಯಿಸುತ್ತಿರುವುದಕ್ಕೆ ಖುಷಿಯಿದೆ’ ಎನ್ನುತ್ತಾರೆ ನಮ್ರತಾ ಗೌಡ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.