ADVERTISEMENT

ಪ್ರೇಮಿಗಳ ದಿನಕ್ಕೆ ‘ಟ್ರಾನ್ಸ್‌’

​ಪ್ರಜಾವಾಣಿ ವಾರ್ತೆ
Published 30 ಜನವರಿ 2020, 14:21 IST
Last Updated 30 ಜನವರಿ 2020, 14:21 IST
ನಸ್ರಿಯಾ–ಫಹದ್ ಫಾಸಿಲ್‌
ನಸ್ರಿಯಾ–ಫಹದ್ ಫಾಸಿಲ್‌   

ಮಲಯಾಳ ಚಿತ್ರರಂಗದ ಖ್ಯಾತ ಜೋಡಿ ನಸ್ರಿಯಾ ನಜೀಂ ಮತ್ತು ಫಹದ್‌ ಫಾಸಿಲ್‌ ದಂಪತಿ ತೆರೆಯ ಮೇಲೂ ಒಟ್ಟಿಗೆ ನಟಿಸಿದ ‘ಟ್ರಾನ್ಸ್‌’ ಪ್ರೇಮಿಗಳ ದಿನವಾದ ಫೆಬ್ರುವರಿ 14ರಂದು ತೆರೆ ಕಾಣಲಿದೆ.

ಎರಡು ವರ್ಷಗಳ ವಿರಾಮದ ನಂತರನಸ್ರಿಯಾ ಸಿನಿಮಾಕ್ಕೆ ಮರಳಿದ್ದು, ‘ಟ್ರಾನ್ಸ್‌’ ಚಿತ್ರದಲ್ಲಿ ಪತಿ ಫಹದ್‌ ಫಾಸಿಲ್‌ ಜತೆ ತೆರೆ ಹಂಚಿಕೊಂಡಿದ್ದಾರೆ. ಈ ಜೋಡಿ ‘ಬೆಂಗಳೂರು ಡೇಸ್‌’ನಲ್ಲಿ ಒಟ್ಟಿಗೆ ಕಾಣಿಸಿಕೊಂಡಿತ್ತು.

‘ಟ್ರಾನ್ಸ್‌’ ಚಿತ್ರದ ಪೋಸ್ಟರ್‌ ಎಲ್ಲರ ಮನ ಸೆಳೆದಿದೆ.ಸೌಬಿನ್‌ ಶಹೀರ್‌, ಗೌತಮ್‌ ಮೆನನ್‌, ಚೆಂಬನ್‌ ವಿನೋದ್‌, ವಿನಾಯಕನ್‌, ಶ್ರೀನಾಥ್‌ ಭಾಸಿ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ.ಆರು ವರ್ಷಗಳ ನಂತರ ಮತ್ತೆ ನಿರ್ದೇಶನಕ್ಕೆ ಇಳಿದಿರುವ ಅನ್ವರ್‌ ರಶೀದ್‌ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದ ಮೂಲಕ ನಿರ್ದೇಶಕ ಅಮಲ್‌ ನೀರಾದ್‌ ಅವರು ಸಿನಿಮಾಟೋಗ್ರಾಫರ್‌ ಆಗಿ ಬದಲಾಗಿದ್ದಾರೆ. ವಿನ್ಸೆಂಟ್‌ ಅವರ ಚಿತ್ರಕತೆ ಇದಕ್ಕಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.