ADVERTISEMENT

ನವಾಜುದ್ದೀನ್ ಈಗ ‘ಸೀರಿಯಸ್ ಮ್ಯಾನ್’

ಹೊಸ ವೆಬ್ ಸೀರಿಸ್

​ಪ್ರಜಾವಾಣಿ ವಾರ್ತೆ
Published 12 ಜೂನ್ 2019, 3:03 IST
Last Updated 12 ಜೂನ್ 2019, 3:03 IST
ನವಾಜುದ್ದೀನ್‌ ಸಿದ್ದಿಕಿ
ನವಾಜುದ್ದೀನ್‌ ಸಿದ್ದಿಕಿ   

2018 ನಟ ನವಾಜುದ್ದೀನ್ ಸಿದ್ಧಿಕಿ ಪಾಲಿಗೆ ಅದೃಷ್ಟವೆಂದೇ ಹೇಳಬಹುದು.

‘ಸೆಕ್ರೆಡ್ ಗೇಮ್ಸ್‌’ ಕ್ರೈಮ್ ಥ್ರಿಲ್ಲರ್ ವೆಬ್ ಸರಣಿಯಲ್ಲಿ ಗಣೇಶ್ ಗಾಯ್‌ತೊಂಡೆ ಪಾತ್ರದಲ್ಲಿ ನವಾಜುದ್ದೀನ್ ಪ್ರೇಕ್ಷಕರನ್ನು ಮೋಡಿ ಮಾಡಿದ್ದರು. ಅದೇ ಮೋಡಿ ಈಗ ನವಾಜುದ್ದೀನ್‌ಗೆ ಹೊಸ ವೆಬ್‌ಸರಣಿಯಲ್ಲಿ ನಟಿಸಲು ಅವಕಾಶ ದಕ್ಕಿಸಿಕೊಟ್ಟಿದೆ.

‘ಸೀರಿಯಸ್ ಮ್ಯಾನ್’ ಹೆಸರಿನ ಹೊಸ ವೆಬ್‌ಸರಣಿಯಲ್ಲಿ ನವಾಜುದ್ದೀನ್ ಕೊಳೆಗೇರಿ ನಿವಾಸಿಯಾಗಿ ಕಾಣಿಸಿಕೊಂಡಿದ್ದಾರೆ. ಈ ವೆಬ್‌ಸರಣಿಯು ಮನು ಜೋಸೆಫ್ ಅವರ ‘ಸೀರಿಯಸ್ ಮ್ಯಾನ್’ ಅನ್ನುವ ಜನಪ್ರಿಯ ಕಾದಂಬರಿ ಆಧರಿಸಿದೆ.

ADVERTISEMENT

ಬಾಲಿವುಡ್‌ನ ಖ್ಯಾತ ನಿರ್ದೇಶಕ ಸುಧೀರ್ ಮಿಶ್ರಾ ಈ ವೆಬ್ ಸರಣಿಯನ್ನು ನಿರ್ದೇಶಿಸುತ್ತಿದ್ದಾರೆ. ಅಯ್ಯನ್ ಮಣಿ ಹೆಸರಿನ ಕೊಳೆಗೇರಿ ನಿವಾಸಿ ಪಾತ್ರದಲ್ಲಿ ನವಾಜುದ್ದೀನ್ ನಟಿಸುತ್ತಿದ್ದು, ತನ್ನ ಹತ್ತು ವರ್ಷದ ಮಗ ಅತ್ಯಂತ ಪ್ರತಿಭಾವಂತ ಎಂದು ನಂಬುವ ತಂದೆ ಪಾತ್ರ ಇದಾಗಿದೆ.

ಈ ವೆಬ್‌ಸರಣಿಯಲ್ಲಿ ಕೊಳೆಗೇರಿ ನಿವಾಸಿಗಳ ಬದುಕು ಅನಾವರಣಗೊಂಡಿದ್ದು, ಬಡತನದ ಜೊತೆಗೆ ಜಾತಿ ಮತ್ತು ವರ್ಗ ಸಂಘರ್ಷದ ಕಥೆಯೂ ಅಡಗಿದೆ. ಈ ವೆಬ್ ಸರಣಿಯ ಬಿಡುಗಡೆಯ ದಿನಾಂಕ ಇನ್ನೂ ಘೋಷಿಸಿಲ್ಲ.

ನವಾಜುದ್ದೀನ್ ಅವರ ‘ಫೋಟೊಗ್ರಾಫರ್’ ಸಿನಿಮಾ ಈಚೆಗಷ್ಟೇ ಬಿಡುಗಡೆ ಕಂಡಿತ್ತು. ಸದ್ಯಕ್ಕೆ ನವಾಜ್ ಕೈಯಲ್ಲಿ ‘ಬೋಲೆ ಚೂಂಡಿಯಾ’, ‘ರಾತ್ ಅಖೇಲಿ ಹೈ’ ಸಿನಿಮಾಗಳಿವೆ,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.