ADVERTISEMENT

ಧರ್ಮ ಕೀರ್ತಿರಾಜ್ ನಟನೆಯ ‘ನಯನ ಮನೋಹರ’ ಸಿನಿಮಾದ ಶೀರ್ಷಿಕೆ, ಟೀಸರ್ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 2 ಜನವರಿ 2026, 0:01 IST
Last Updated 2 ಜನವರಿ 2026, 0:01 IST
ಧರ್ಮ ಕೀರ್ತಿರಾಜ್‌
ಧರ್ಮ ಕೀರ್ತಿರಾಜ್‌   

ಧರ್ಮ ಕೀರ್ತಿರಾಜ್ ನಾಯಕನಾಗಿ ನಟಿಸುತ್ತಿರುವ ‘ನಯನ ಮನೋಹರ’ ಸಿನಿಮಾದ ಶೀರ್ಷಿಕೆ ಹಾಗೂ ಟೀಸರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿವೆ. ಪುನೀತ್‌ ಕೆ.ಜಿ.ಆರ್ ಚೊಚ್ಚಲ ನಿರ್ದೇಶನದ ಚಿತ್ರವಿದು.

‘ನಾಯಕನಾಗಿ 25ನೇ ಚಿತ್ರವಿದು. ಇದೊಂದು ಮೈಲುಗಲ್ಲು ಎನ್ನಬಹುದು. ಮೂರು ಶೇಡ್‌ಗಳಲ್ಲಿ ಕಾಣಿಸಿಕೊಳ್ಳುತ್ತೇನೆ. ಈ ಸಿನಿಮಾ ನನಗೆ ಹೆಸರು ತಂದುಕೊಡುತ್ತದೆ ಎಂಬ ನಂಬಿಕೆಯಿದೆ’ ಎಂದರು ಧರ್ಮ ಕೀರ್ತಿರಾಜ್.

‘ಸಿನಿಮಾ ನೂರು ದಿನ ಪ್ರದರ್ಶನ ಕಂಡಾಗ ಇದೇ ಜಾಗದಲ್ಲಿಯೇ ಸಂಭ್ರಮಿಸೋಣ. ಟೀಸರ್‌ನಲ್ಲಿರುವಂತೆ ಚಿತ್ರ ಮಾಡಿ. ಕನ್ನಡ ಚಿತ್ರೋದ್ಯಮ ಯಾವುದರಲ್ಲಿಯೂ ಕಡಿಮೆ ಇಲ್ಲ. ಮೊದಲು ಕನ್ನಡ ಚಿತ್ರ ನೋಡಿ. ನಂತರ ಬೇರೆ ಭಾಷೆಯ ಕಡೆ ಗಮನ ಕೊಡಿ’ ಎಂದರು ಪ್ರಿಯಾಂಕ ಉಪೇಂದ್ರ.

ADVERTISEMENT

ಅನುಷ್ ಸಿದ್ದಪ್ಪ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ. ವಾಸುಕಿ ವೈಭವ್ ಸಂಗೀತವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.