ADVERTISEMENT

ಗೋವಾ ಬೀಚ್‌ನಲ್ಲಿ ಹಾಲಿಡೇ ಮೂಡ್‌ನಲ್ಲಿ ನಯನತಾರಾ ಹಾಗೂ ಶಿವನ್‌!

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2020, 16:42 IST
Last Updated 15 ಸೆಪ್ಟೆಂಬರ್ 2020, 16:42 IST
ನಯನತಾರಾ
ನಯನತಾರಾ   

ನಟಿ ನಯನತಾರಾ ಹಾಗೂ ನಿರ್ದೇಶಕ ವಿಘ್ನೇಶ್‌ ಶಿವನ್ ಮಧ್ಯೆ ಇರುವ ಪ್ರೇಮ ಪ್ರಕರಣದ ಸುದ್ದಿ ಈಗ ಹೊಸತಲ್ಲ. ಈ ಜೋಡಿ ಸಹಜೀವನ ನಡೆಸುತ್ತಿದ್ದು ಎಲ್ಲೆಡೆ ಒಂದಾಗಿ ತಿರುಗುತ್ತಿದ್ದಾರೆ. ಅಲ್ಲದೇ ತಮ್ಮ ಪ್ರೇಮ ಪ್ರಕರಣ ಬಹಿರಂಗವಾದ ಮೇಲೆ ವಿಶ್ವದೆಲ್ಲೆಡೆ ಪ್ರವಾಸ ಮಾಡುತ್ತಿದ್ದಾರೆ.ಈಗ ಗೋವಾದ ಬೀಚ್ ರೆಸಾರ್ಟ್‌ವೊಂದರಲ್ಲಿ ರಜೆಯ ಮಜಾ ಅನುಭವಿಸುತ್ತಿದೆ ಈ ಜೋಡಿ.

ಗೋವಾದಲ್ಲಿ ತಾವು ಕ್ಲಿಕ್ಕಿಸಿದ ನಯನತಾರಾ ಫೋಟೊಗಳನ್ನು ತಮ್ಮ ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ ವಿಘ್ನೇಶ್‌.

ದಕ್ಷಿಣ ಭಾರತದ ಖ್ಯಾತ ನಟಿ ಎನ್ನಿಸಿಕೊಂಡಿರುವ ನಯನತಾರಾ ತಮ್ಮ ನಟನಾ ವೃತ್ತಿಯಲ್ಲಿ ಸೋಲು ಕಂಡಿದ್ದೇ ಕಡಿಮೆ. ದಕ್ಷಿಣದ ಎಲ್ಲಾ ಭಾಷೆಯ ಸಿನಿಮಾಗಳಲ್ಲಿ ನಟಿಸುವ ಜೊತೆಗೆ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ ಈ ಬೆಡಗಿ. ಪ್ರಿಯಕರ, ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ನಮ್ಮ ವೈಯಕ್ತಿಕ ಹಾಗೂ ವೃತ್ತಿಜೀವನವನ್ನು ಸಂತಸದಿಂದ ಕಳೆಯುತ್ತಿದ್ದಾರೆ ಈ ನಟಿ.

ADVERTISEMENT

ಆಗಾಗ ದೇಶ–ವಿದೇಶಗಳ ಪ್ರವಾಸಿತಾಣಗಳಿಗೆ ಭೇಟಿ ನೀಡುವ ನಯನತಾರಾ ತಮ್ಮ ಪ್ರವಾಸದ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.

ನಯನತಾರಾ ಹಾಗೂ ವಿಘ್ನೇಶ್ ಶಿವನ್ ಇಬ್ಬರೂ ಕೆಲ ದಿನಗಳಿಂದ ಸಹಜೀವನ ನಡೆಸುತ್ತಿದ್ದಾರೆ. ವಿಘ್ನೇಶ್ ನಿರ್ದೇಶನದ ‘ನಾನುಂ ರೌಡಿ ದಾನ್‌’ ಸಿನಿಮಾದಲ್ಲಿ ನಟಿಸಿದ ಬಳಿಕ ನಯನಾತಾರಾ ಪ್ರೀತಿಯಲ್ಲಿ ಬಿದ್ದಿದ್ದರು. ಮೊದಲು ಈ ಜೋಡಿ ಪ್ರೇಮ ಪ್ರಕರಣದ ವಿಷಯವನ್ನು ಗುಟ್ಟಾಗಿ ಇಟ್ಟಿದ್ದರು. ಆದರೆ ಸಾಮಾಜಿಕ ಜಾಲತಾಣದಲ್ಲಿ ವಿಷಯ ಬಹಿರಂಗವಾದ ಬಳಿಕ ತಾವು ಒಟ್ಟಿಗಿರುವ ಫೋಟೊಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.