ADVERTISEMENT

ನಟಿ ನಯನತಾರಾ – ವಿಘ್ನೇಶ್‌ಗೆ ಅವಳಿ ಗಂಡು ಮಕ್ಕಳು: ಚಿತ್ರ ಹಂಚಿಕೊಂಡ ದಂಪತಿ 

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2022, 14:42 IST
Last Updated 9 ಅಕ್ಟೋಬರ್ 2022, 14:42 IST
ದಂಪತಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಮಕ್ಕಳ ಚಿತ್ರ
ದಂಪತಿ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿರುವ ಮಕ್ಕಳ ಚಿತ್ರ    

ಚೆನ್ನೈ: ಬಹುಭಾಷಾ ನಟಿ ನಯನತಾರಾ ಮತ್ತು ಚಿತ್ರ ನಿರ್ಮಾಪಕ ವಿಘ್ನೇಶ್ ಶಿವನ್ ದಂಪತಿಗೆ ಭಾನುವಾರ ಅವಳಿ ಗಂಡು ಮಕ್ಕಳು ಜನಿಸಿವೆ.

ನಯನತಾರಾ ಮತ್ತು ವಿಘ್ನೇಶ್‌ ಅವರು ಮಕ್ಕಳ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ. ಉಯಿರ್‌ (ಉಸಿರು), ಉಲಗಮ್‌ (ಜಗತ್ತು) ಎಂದು ಮಕ್ಕಳನ್ನು ಹೆಸರಿಸಿರುವುದಾಗಿ ದಂಪತಿ ಹೇಳಿಕೊಂಡಿದ್ದಾರೆ.

‘ನಮ್ಮ ಎಲ್ಲಾ ಪ್ರಾರ್ಥನೆಗಳು...ನಮ್ಮ ಪೂರ್ವಜರ ಆಶೀರ್ವಾದಗಳೆಲ್ಲವೂ ಒಳ್ಳೆಯ ಅಭಿವ್ಯಕ್ತಿಯೊಂದಿಗೆ ಸಮ್ಮಿಲನಗೊಂಡಿವೆ. ಆ ಆಶೀರ್ವಾದಗಳೆಲ್ಲವೂ ಎರಡು ಶಿಶುಗಳ ರೂಪದಲ್ಲಿ ನಮಗಾಗಿ ಒಟ್ಟಿಗೆ ಬಂದಿವೆ’ ಎಂದು ಅವರು ಬರೆದುಕೊಂಡಿದ್ದಾರೆ.

ADVERTISEMENT

ಇದನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.