ADVERTISEMENT

ಈಗ ನೇಹಾ ಧೂಪಿಯಾ ಮಗಳ ಸರದಿ!

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2018, 19:30 IST
Last Updated 21 ನವೆಂಬರ್ 2018, 19:30 IST
ಮೆಹರ್ ಧೂಪಿಯಾ
ಮೆಹರ್ ಧೂಪಿಯಾ   

ಬಾಲಿವುಡ್‌ನಲ್ಲಿ ಈಚೆಗೆ ತಾರೆಯರ ಮದುವೆ ಸಂಭ್ರಮ, ನಟಿಯರ ಹೆರಿಗೆ ಸುದ್ದಿಗಳದ್ದೇ ಸಡಗರ. ಕರಣ್ ಜೋಹರ್, ಕರೀನಾ ಕಪೂರ್, ಸೋಹಾ ಅಲಿ ಖಾನ್ ಮಕ್ಕಳ ಸಂಭ್ರಮದ ನಂತರ ಈಗ ನಟಿ ನೇಹಾ ಧೂಪಿಯಾ ಮಗಳ ಸರದಿ.

ಈಚೆಗಷ್ಟೆ ಹೆಣ್ಣು ಮಗುವಿಗೆ ಜನ್ಮ ನೀಡಿರುವ ನೇಹಾ, ತಮ್ಮ ಮಗಳ ಪಾದಗಳ ಫೋಟೊವನ್ನು ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದಾರೆ. ಬಿಳಿ ಬಣ್ಣದ ಫುಲ್ ಪ್ಯಾಂಟ್ ಮತ್ತು ಬಿಳಿ ಸಾಕ್ಸ್ ಧರಿಸುವ ಪುಟಾಣಿ ಕಾಲ್ಗಳಲ್ಲಿ ‘ಹಲೋ ವರ್ಲ್ಡ್‌’ ಎನ್ನುವ ಒಕ್ಕಣೆಯೂ ಇದೆ. ಅಂಗದ್ ಬೇಡಿ ಮತ್ತು ನೇಹಾ ತಮ್ಮ ಮಗಳಿಗೆ ಮೆಹರ್ ಧೂಪಿಯಾ ಎನ್ನುವ ಹೆಸರನ್ನೂ ಇಟ್ಟಿದ್ದಾರಂತೆ.

ಈಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಕರೀನಾ ಕಪೂರ್, ಕರಣ್, ಸೋಹಾ ಅಲಿ ಖಾನ್ ಅವರ ಮಕ್ಕಳದ್ದೇ ಹೆಚ್ಚು ಸುದ್ದಿಯಾಗುತ್ತಿದ್ದು. ಸೆಲೆಬ್ರಿಟಿಗಳ ಮಕ್ಕಳು ಬಾಲ್ಯದಲ್ಲೇ ತಮ್ಮ ಪೋಷಕರಿಗಿಂತ ಹೆಚ್ಚು ಜನಪ್ರಿಯರಾಗಿದ್ದಾರೆ. ಈ ಸಾಲಿಗೆ ನೇಹಾ ಮಗಳು ಮೆಹರ್ ಹೆಸರು ಕೂಡಾ ಸೇರ್ಪಡೆಯಾದರೆ ಅಚ್ಚರಿಯಿಲ್ಲ.

ADVERTISEMENT

ಒಟ್ಟಿನಲ್ಲಿ ಬಾಲಿವುಡ್‌ನಲ್ಲಿ ಸದ್ಯಕ್ಕೆ ಸಿನಿಮಾಗಳಿಗಿಂತ ದೀಪಿಕಾ–ರಣವೀರ್, ಪ್ರಿಯಾಂಕ ಚೋಪ್ರಾ–ನಿಕ್ಕ್ ಮದುವೆ ಹಾಗೂ ನೇಹಾ ಧೂಪಿಯಾ ಮಗಳ ಪಾದ ದರ್ಶನವೂ ಸುದ್ದಿಯಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.