
‘ಸ್ಕೈಲ್ಯಾಬ್’ ಸಿನಿಮಾ ಚಿತ್ರೀಕರಣದ ನೆನಪುಗಳನ್ನು ನಟಿ ನಿತ್ಯಾ ಮೆನನ್ ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
ನಟಿ ನಿತ್ಯಾ ಮೆನನ್ ಅವರು ವಯೋವೃದ್ಧೆಯೊಬ್ಬರ ಜತೆಗಿನ ಚಿತ್ರಗಳನ್ನು ಹಂಚಿಕೊಂಡು, ‘ ಆ ದಿನ ಸೂರ್ಯಾಸ್ತ ಸಮಯ. ಆಕಾಶದಲ್ಲಿ ಅದ್ಭುತವಾದ ಬಂಗಾರದ ಕಿತ್ತಳೆ ಹೊಳಪು. ನಾನು ಪ್ರೀತಿಸುವ ಜನರೊಂದಿಗೆ ಕೆಲಸ ಮಾಡುತ್ತಿದ್ದ ಕ್ಷಣದಲ್ಲಿ ನನ್ನ ಅಜ್ಜಿಯನ್ನು ನೆನಪಿಸುವಂತಹ ಒಬ್ಬರು ವಯೋವೃದ್ದೆ ನನ್ನ ಜತೆ ಇದ್ದರು. ಆ ಕ್ಷಣ ಆ ಬಂಗಾರದ ಹೊಳಪು ನನ್ನ ಹೃದಯದಲ್ಲೇ ಹೊಳೆಯುತ್ತಿದ್ದಂತೆ ಅನಿಸಿತು. ತಾನೇ ನಿರ್ಮಿಸಿದ ಚಿತ್ರಕ್ಕೆ ಇಂದಿಗೆ 4 ವರ್ಷ‘ ಎಂದು ಬರೆದುಕೊಂಡಿದ್ದಾರೆ.
ಕನ್ನಡದಲ್ಲಿ ‘ಮೈನಾ’ , ‘ಜೋಶ್’, ‘ಕೋಟಿಗೊಬ್ಬ2’ ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯ, ತೆಲುಗು, ತಮಿಳು , ಮಲಯಾಳಂ ಚಿತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.