ADVERTISEMENT

‘ಪಿಂಕ್’ ತೆಲುಗು ರಿಮೇಕ್‌ನಲ್ಲಿ ನಿವೇತಾ ಥಾಮಸ್‌

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2019, 8:48 IST
Last Updated 18 ಡಿಸೆಂಬರ್ 2019, 8:48 IST
Nivetha Thomas
Nivetha Thomas   

ಸಮಾಜದ ಪ್ರಭಾವಶಾಲಿ ವ್ಯಕ್ತಿಗಳು ನಡೆಸುವ ಲೈಂಗಿಕ ದೌರ್ಜನ್ಯದ ವಿರುದ್ಧ ಕಾನೂನು ಸಮರ ಸಾರುವ ಮೂವರು ಮಹಿಳೆಯರ ಕತೆ ಹೊಂದಿದ್ದ ಬಾಲಿವುಡ್‌ನ ‘ಪಿಂಕ್‌’ ಚಿತ್ರ ಇದೀಗ ತೆಲುಗು ಭಾಷೆಗೂ ರಿಮೇಕ್‌ ಆಗುತ್ತಿದೆ.

ಎಲ್ಲರ ಮೆಚ್ಚುಗೆ ಗಳಸಿದ್ದ ಅಮಿತಾಭ್ ಬಚ್ಚನ್‌ ಪಾತ್ರವನ್ನು ನಟ ಪವನ್‌ ಕಲ್ಯಾಣ್ ನಿರ್ವಹಿಸಲಿದ್ದಾರೆ ಎಂಬ ಸುದ್ದಿಈಗಾಗಲೇ ಖಚಿತವಾಗಿದೆ. ನಟಿ ತಾಪ್ಸಿ ಪನ್ನು ಪಾತ್ರಕ್ಕೆ ‘ನಿನ್ನು ಕೋರಿ’ ಖ್ಯಾತಿಯ ನಟಿ ನಿವೇತಾ ಥಾಮಸ್‌ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಇದೀಗ ಹೊರಬಿದ್ದಿದೆ. ಈ ಬಗ್ಗೆ ಚಿತ್ರತಂಡ ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ. ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮೂವರು ಮಹಿಳೆಯರಿಗೆ ಬೆಂಬಲವಾಗಿ ನಿಲ್ಲುವ ವಕೀಲನ ಪಾತ್ರದಲ್ಲಿ ಅಮಿತಾಭ್‌ ನಟಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT