ADVERTISEMENT

ಮಾಧ್ಯಮಗಳ ಮುಖಕ್ಕೆ ಹೊಡೆದಂತಾಯಿತೇ?: ನಟ ಗೋವಿಂದ ಪತ್ನಿ ಹೀಗೆ ಹೇಳಿದ್ದೇಕೆ?

ಪಿಟಿಐ
Published 28 ಆಗಸ್ಟ್ 2025, 3:05 IST
Last Updated 28 ಆಗಸ್ಟ್ 2025, 3:05 IST
<div class="paragraphs"><p>ಗಣೇಶ&nbsp;ಚತುರ್ಥಿ ಆಚರಣೆ ವೇಳೆ ಸಾಂಪ್ರದಾಯಿಕ ಉಡುಪಿನಲ್ಲಿ ಕಾಣಿಸಿಕೊಂಡಿರುವ ನಟ ಗೋವಿಂದ ಹಾಗೂ ಅವರ ಪತ್ನಿ ಸುನೀತಾ ಅಹುಜಾ</p></div>

ಗಣೇಶ ಚತುರ್ಥಿ ಆಚರಣೆ ವೇಳೆ ಸಾಂಪ್ರದಾಯಿಕ ಉಡುಪಿನಲ್ಲಿ ಕಾಣಿಸಿಕೊಂಡಿರುವ ನಟ ಗೋವಿಂದ ಹಾಗೂ ಅವರ ಪತ್ನಿ ಸುನೀತಾ ಅಹುಜಾ

   

ಕೃಪೆ: ಪಿಟಿಐ

ಮುಂಬೈ: ದಾಂಪತ್ಯದಲ್ಲಿ ಬಿರುಕು ಮೂಡಿದೆ, ವಿಚ್ಛೇದನ ಪಡೆಯಲಿದ್ದಾರೆ ಎಂಬ ವದಂತಿಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದರ ನಡುವೆಯೇ ನಟ ಗೋವಿಂದ ಹಾಗೂ ಅವರ ಪತ್ನಿ ಸುನೀತಾ ಅಹುಜಾ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ. ನಾವಿಬ್ಬರೂ ಒಟ್ಟಾಗಿದ್ದೇವೆ. ನಮ್ಮನ್ನು ಬೇರೆ ಮಾಡಲು ಯಾರಿಗೂ ಸಾಧ್ಯವಿಲ್ಲ ಎಂದು ಅಹುಜಾ ಹೇಳಿದ್ದಾರೆ.

ADVERTISEMENT

ಮುಂಬೈ ಉಪನಗರದಲ್ಲಿರುವ ತಮ್ಮ ಮನೆಯಲ್ಲಿ ಸಾಂಪ್ರದಾಯಿಕ ಉಡುಪಿನಲ್ಲಿ ಕಾಣಿಸಿಕೊಂಡಿರುವ ದಂಪತಿ, ಒಟ್ಟಾಗಿ ಗಣೇಶ ಚತುರ್ಥಿ ಆಚರಿಸಿದ್ದಾರೆ.

ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿರುವ ಅಹುಜಾ, 'ಇಂದು ನಮ್ಮನ್ನು ಹೀಗೆ, ಒಟ್ಟಿಗೆ ನೋಡುತ್ತಿರುವುದು ಮಾಧ್ಯಮಗಳ ಕಪಾಳಕ್ಕೆ ಹೊಡೆದಂತಾಗಿಲ್ಲವೇ? ಏನಾದರೂ ಸಮಸ್ಯೆ ಇದ್ದಿದ್ದರೆ ಇಷ್ಟು ಹತ್ತಿರ ಇರುತ್ತಿದ್ದೆವೆಯೇ? ಯಾರೂ ನಮ್ಮನ್ನು ದೂರ ಮಾಡಲು ಸಾಧ್ಯವಿಲ್ಲ. ನನ್ನ ಗೋವಿಂದ ನನ್ನವನು. ನಾವಾಗಿಯೇ ಏನಾದರೂ ಹೇಳುವವರೆಗೆ ದಯವಿಟ್ಟು ಏನೇನೋ ಬರೆಯಬೇಡಿ' ಎಂದು ಹೇಳಿದ್ದಾರೆ.

ಅಹುಜಾ ಅವರು ವಿಚ್ಛೇದನ ಕೋರಿ ಬಾಂದ್ರಾದ ಕೌಟುಂಬಿಕ ನ್ಯಾಯಾಲಯದಲ್ಲಿ 2024ರ ಡಿಸೆಂಬರ್ 5ರಂದು ಅರ್ಜಿ ಸಲ್ಲಿಸಿದ್ದಾರೆ ಎಂದು ಸುದ್ದಿವಾಹಿನಿಯೊಂದು ಕಳೆದವಾರ ವರದಿ ಮಾಡಿತ್ತು. ಆದರೆ, ಗೋವಿಂದ ಅವರ ಮ್ಯಾನೇಜರ್‌ ಅದನ್ನು ಅಲ್ಲಗಳೆದಿದ್ದರು. ದಂಪತಿ ಒಟ್ಟಿಗೆ ಇದ್ದಾರೆ. ಯಾವುದೇ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.

'ಇದು ಆರೇಳು ತಿಂಗಳು ಹಿಂದಿನ ಸುದ್ದಿ. ಈಗ ಎಲ್ಲವೂ ಇತ್ಯರ್ಥವಾಗಿದೆ. ಒಂದು ವಾರದಲ್ಲಿ ಎಲ್ಲರಿಗೂ ಸುದ್ದಿ ತಿಳಿಯಲಿದೆ' ಎಂದಿದ್ದರು.

ಅಹುಜಾ ಅವರು ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ. ಅವರು ವಿಚ್ಛೇದನ ಪಡೆಯಲಿದ್ದಾರೆ ಎಂಬ ಊಹಾಪೋಹಗಳು ಈ ವರ್ಷ ಫೆಬ್ರುವರಿಯಿಂದಲೂ ಹರಿದಾಡುತ್ತಿವೆ.

ಗೋವಿಂದ  ಹಾಗೂ ಅಹುಜಾ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಗ ಯಶವರ್ಧನ್ ಅಹುಜಾ ಮತ್ತು ಮಗಳು ಟೀನಾ ಅಹುಜಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.