ADVERTISEMENT

ಹಿಂದಿಗೆ ‘ಓ ಮೈ ಕಡವುಲೆ’

​ಪ್ರಜಾವಾಣಿ ವಾರ್ತೆ
Published 13 ಮೇ 2020, 19:30 IST
Last Updated 13 ಮೇ 2020, 19:30 IST
‘ಓ ಮೈ ಕಡವುಲೆ’ ಚಿತ್ರದ ದೃಶ್ಯ
‘ಓ ಮೈ ಕಡವುಲೆ’ ಚಿತ್ರದ ದೃಶ್ಯ   

ಕಾಲಿವುಡ್‌ನಲ್ಲಿಈಚೆಗೆ ಬಿಡುಗಡೆಯಾಗಿರುವ ಅಶ್ವಥ್‌ ಮಾರಿಮುತ್ತು ನಿರ್ದೇಶನದ ಮೊದಲ ಸಿನಿಮಾ ‘ಓ ಮೈ ಕಡವುಲೆ’ಭಾರಿ ಹಿಟ್‌ ಆಗಿತ್ತು. ಫೆಬ್ರುವರಿ 14ರಂದು ಬಿಡುಗಡೆಯಾಗಿದ್ದ ಈ ಚಿತ್ರಕ್ಕೆ ಪ್ರೇಕ್ಷಕ ಹಾಗೂ ಸಿನಿಮಾ ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈಗ ಈ ಚಿತ್ರವು ಹಿಂದಿಗೆ ರಿಮೇಕ್‌ ಆಗಲಿದೆ ಎಂಬ ಸುದ್ದಿ ಕೇಳಿಬರುತ್ತಿದೆ.

ತಮಿಳಿನ ಈ ಚಿತ್ರದಲ್ಲಿ ಅಶೋಕ್‌ ಸೆಲ್ವನ್‌ ಹಾಗೂ ರಿತಿಕಾ ಸಿಂಗ್‌ ನಾಯಕ– ನಾಯಕಿಯಾಗಿ ನಟಿಸಿದ್ದಾರೆ.ಈ ಚಿತ್ರದ ನಿರ್ಮಾಪಕರು ಈಗ ಅದನ್ನು ಹಿಂದಿಯಲ್ಲಿ ತಯಾರಿಸಲು ಆಲೋಚಿಸಿದ್ದಾರೆ. ಈಗಾಗಲೇ ಹಿಂದಿ ರಿಮೇಕ್‌ ಚಿತ್ರದ ಕೆಲಸಗಳು ಆರಂಭವಾಗಿವೆ. ಮೂಲ ಚಿತ್ರಕ್ಕೆ ಬಂಡವಾಳ ಹೂಡಿರುವ ಅಶೋಕ್‌ ಸೆಲ್ವನ್,‌ ಅವರೇ ಹಿಂದಿಯಲ್ಲೂ ನಿರ್ಮಾಣ ಮಾಡುತ್ತಿದ್ದಾರೆ.

‘ಹಿಂದಿಗೆ ರಿಮೇಕ್‌ ಆಗುತ್ತಿರುವುದು ನಿಜ, ಸದ್ಯದಲ್ಲೇ ಕಲಾವಿದರ ಮಾಹಿತಿಯನ್ನು ಬಹಿರಂಗ ಮಾಡುತ್ತೇವೆ’ ಎಂದು ಅವರು ಸ್ಪಷ್ಟನೆ ಕೊಟ್ಟಿದ್ದಾರೆ. ಲಾಕ್‌ಡೌನ್‌ ಮುಗಿದ ನಂತರ ಈ ಚಿತ್ರದ ಬಗ್ಗೆ ಅಧಿಕೃತ ಘೋಷಣೆ ಮಾಡಲಿದ್ದಾರೆ.

ADVERTISEMENT

ಕೆಲ ದಿನಗಳ ಹಿಂದೆ ಈ ಚಿತ್ರವು ತೆಲುಗಿಗೆ ರಿಮೇಕ್‌ ಆಗಲಿದ್ದು, ಪಿವಿಪಿ ಸಿನಿಮಾಸ್‌ ರಿಮೇಕ್‌ ಹಕ್ಕನ್ನು ಪಡೆದುಕೊಂಡಿದೆ ಎಂದು ಸುದ್ದಿಯಾಗಿತ್ತು. ತೆಲುಗು ರಿಮೇಕ್‌ಗೂ ಕಲಾವಿದರ ಆಯ್ಕೆ ನಡೆಯುತ್ತಿದೆ ಎನ್ನಲಾಗಿದೆ.

‘ಓ ಮೈ ಕಡವುಲೆ’ ಸಿನಿಮಾದಲ್ಲಿ ಅಶೋಕ್‌ ಸೆಲ್ವನ್‌,ರಿತಿಕಾ ಸಿಂಗ್‌, ವಿಜಯ್‌ ಸೇತುಪತಿ, ವಾಣಿ ಭಜನ್‌ ಮೊದಲಾದವರು ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.