ADVERTISEMENT

ದರ್ಶನ ನೀಡಲು ಸಜ್ಜಾದ ಒಡೆಯ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 19:30 IST
Last Updated 28 ನವೆಂಬರ್ 2019, 19:30 IST
‘ಒಡೆಯ’ ಚಿತ್ರದಲ್ಲಿ ದರ್ಶನ್‌
‘ಒಡೆಯ’ ಚಿತ್ರದಲ್ಲಿ ದರ್ಶನ್‌   

‘ಯಜಮಾನ’, ‘ಮುನಿರತ್ನ ಕುರುಕ್ಷೇತ್ರ’ ಸಿನಿಮಾಗಳ ಗೆಲುವಿನ ಅಲೆಯ ನಡುವೆಯೇ ಈ ವರ್ಷ ತೆರೆ ಕಾಣುತ್ತಿರುವ ದರ್ಶನ್‌ ನಟನೆಯ ಮೂರನೇ ಚಿತ್ರ ‘ಒಡೆಯ’. ಇದು ತಮಿಳಿನ ‘ವೀರಂ’ ಚಿತ್ರದ ರಿಮೇಕ್‌. ಈ ಹಿಂದೆ ದರ್ಶನ್‌ಗಾಗಿ ‘ಪೊರ್ಕಿ’ ಮತ್ತು ‘ಬುಲ್‌ಬುಲ್‌’ ಚಿತ್ರ ನಿರ್ದೇಶಿಸಿದ್ದ ಎಂ.ಡಿ. ಶ್ರೀಧರ್‌ ಅವರೇ ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

ಐವರು ಸಹೋದರರ ಪ್ರೀತಿಯ ಅಣ್ಣನ ಕಥೆಯೇ ‘ಒಡೆಯ’ ಚಿತ್ರದ ಕಥಾಹಂದರ. ಬೆಂಗಳೂರು, ಹೈದರಾಬಾದ್, ಮೈಸೂರು ಮತ್ತು ಚಿತ್ರದುರ್ಗದ ಸುತ್ತಮುತ್ತ ಶೂಟಿಂಗ್‌ ನಡೆಸಲಾಗಿದೆ. ಸ್ವಿಡ್ಜರ್ಲೆಂಡ್‌ನಲ್ಲಿ ಹಾಡುಗಳು ಚಿತ್ರೀಕರಣ ನಡೆಸಲಾಗಿದೆ.

ಪ್ರಾದೇಶಿಕ ಚಲನಚಿತ್ರ ಪ್ರಮಾಣೀಕರಣ ಮಂಡಳಿಯು ಚಿತ್ರಕ್ಕೆ ಯು/ಎ ಪ್ರಮಾಣ ಪತ್ರ ನೀಡಿದೆ. ಡಿ. 1ರಂದು ಟ್ರೇಲರ್‌ ಬಿಡುಗಡೆಗೆ ಚಿತ್ರತಂಡ ಸಿದ್ಧತೆ ನಡೆದಿದೆ. ಡಿ. 12ರಂದು ರಾಜ್ಯದಾದ್ಯಂತ ಚಿತ್ರ ಬಿಡುಗಡೆಯಾಗಲಿದೆ.

ADVERTISEMENT

ಸಂದೇಶ್‌ ಪ್ರೊಡಕ್ಷನ್‌ ಲಾಂಛನದಡಿ ಎನ್. ಸಂದೇಶ್‌ ಇದಕ್ಕೆ ಆರ್ಥಿಕ ಇಂಧನ ಒದಗಿಸಿದ್ದಾರೆ. ಈ ಹಿಂದೆ ಇದೇ ಪ್ರೊಡಕ್ಷನ್‌ನಡಿ ದರ್ಶನ್‌ ನಟನೆಯ ‘ಪ್ರಿನ್ಸ್’ ಹಾಗೂ ‘ಐರಾವತ’ ಸಿನಿಮಾ ನಿರ್ಮಿಸಲಾಗಿತ್ತು.

ಅರ್ಜುನ್‌ ಜನ್ಯ ಸಂಗೀತ ಸಂಯೋಜಿಸಿದ್ದಾರೆ. ಜಯಂತ ಕಾಯ್ಕಿಣಿ, ವಿ. ನಾಗೇಂದ್ರ ಪ್ರಸಾದ್, ಕವಿರಾಜ್ ಹಾಗೂ ಚೇತನ್ ಕುಮಾರ್‌ ಅವರ ಗೀತ ಸಾಹಿತ್ಯವಿದೆ.ಎ.ವಿ. ಕೃಷ್ಣಕುಮಾರ್‌ (ಕೆ.ಕೆ.) ಅವರ ಛಾಯಾಗ್ರಹಣವಿದೆ. ಕೆ.ಎಂ. ಪ್ರಕಾಶ್‌ ಅವರ ಸಂಕಲನವಿದೆ. ಕಲೈ ನೃತ್ಯ ನಿರ್ದೇಶನ ಮಾಡಿದ್ದಾರೆ. ವಿಜಯ್ ಅವರ ಸಾಹಸ ನಿರ್ದೇಶನವಿದೆ. ಪ್ರಶಾಂತ್ ರಾಚಪ್ಪ ಸಂಭಾಷಣೆ ಬರೆದಿದ್ದಾರೆ.

ಕೊಡಗು ಮೂಲದ ಸನ ತಿಮ್ಮಯ್ಯ ಈ ಚಿತ್ರದ ನಾಯಕಿ. ಈ ಸಿನಿಮಾ ಮೂಲಕ ಬೆಳ್ಳಿತೆರೆ ಪ್ರವೇಶಿಸುತ್ತಿರುವ ಖುಷಿಯಲ್ಲಿದ್ದಾರೆ. ಯಶಸ್ ಸೂರ್ಯ, ಪಂಕಜ್, ನಿರಂಜನ್, ಸಮರ್ಥ್ ತಾರಾಗಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.