ADVERTISEMENT

ಒರಿಯಾ ಭಾಷೆಯ ಸಂಗೀತ ನಿರ್ದೇಶಕ ಶಾಂತನು ಮಹಾಪಾತ್ರ ವಿಧಿವಶ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2020, 11:18 IST
Last Updated 30 ಡಿಸೆಂಬರ್ 2020, 11:18 IST
ಶಾಂತನು ಮೋಹಪಾತ್ರ
ಶಾಂತನು ಮೋಹಪಾತ್ರ   

ಒರಿಯಾ ಭಾಷೆಯ ಖ್ಯಾತ ಸಂಗೀತ ನಿರ್ದೇಶಕ ಶಾಂತನು ಮಹಾಪಾತ್ರ ಇಂದು ಭುವನೇಶ್ವರದ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ಅವರು ನ್ಯುಮೋನಿಯಾ ಸೇರಿದಂತೆ ವಯೋಸಹಜ ಕಾಯಿಲೆಗಳಿಂದ ಬಳಲುತ್ತಿದ್ದರು.

ಒರಿಯಾ ಸಂಗೀತಕ್ಷೇತ್ರದ ದಿಗ್ಗಜರಾಗಿರುವ ಶಾಂತನು ಆರು ದಶಕಗಳ ಕಾಲ ಸಂಗೀತ ಕ್ಷೇತ್ರವನ್ನಾಳಿದ್ದರು. ಸೂರ್ಯಮುಖಿ, ಅರುಂಧತಿ ಸೇರಿದಂತೆ ಅನೇಕ ಸಿನಿಮಾಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಸಂಗೀತ ಕ್ಷೇತ್ರದ ಖ್ಯಾತನಾಮರಾದ ಲತಾ ಮಂಗೇಷ್ಕರ್‌, ಮಹಮದ್ ರಫಿ, ಮನ್ನಾ ಡೇ, ಉಷಾ ಮಂಗೇಷ್ಕರ್‌, ಸುರೇಶ್ ವಾಡೇಕರ್‌ ಹಾಗೂ ಕವಿತಾ ಕೃಷ್ಣಮೂರ್ತಿ ಮುಂತಾದವರ ಜೊತೆ ಕೆಲಸ ಮಾಡಿದ್ದಾರೆ.

ಇವರ ಸಾವಿಗೆ ಚಿತ್ರರಂಗ ಹಾಗೂ ರಾಜಕೀಯ ರಂಗದ ಗಣ್ಯರು ಸಂತಾಪ ಸೂಚಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.