ADVERTISEMENT

ಓ ಮೈ ಲವ್ ಮೊದಲ ಹಂತದ ಚಿತ್ರೀಕರಣ ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2021, 12:14 IST
Last Updated 15 ಫೆಬ್ರುವರಿ 2021, 12:14 IST
ಅಕ್ಷಿತ್‌ ಶಶಿಕುಮಾರ್‌ ಮತ್ತು ಕೀರ್ತಿ ಕಲ್ಕೆರೆ
ಅಕ್ಷಿತ್‌ ಶಶಿಕುಮಾರ್‌ ಮತ್ತು ಕೀರ್ತಿ ಕಲ್ಕೆರೆ   

ಬೆಂಗಳೂರು: ನಟ ಶಶಿಕುಮಾರ್‌ ಪುತ್ರ ಅಕ್ಷಿತ್‌ ಶಶಿಕುಮಾರ್‌ ಮತ್ತು ಕೀರ್ತಿ ಕಲ್ಕೆರೆ ನಟನೆಯ ಅದ್ಧೂರಿ ಚಿತ್ರ ‘ಓ ಮೈ ಲವ್‌’ ಚಿತ್ರದ ಮೊದಲ ಹಂತದ ಚಿತ್ರೀಕರಣ ಪೂರ್ಣಗೊಂಡಿದೆ.

‘ತೂಫಾನ್’, ‘ಬಳ್ಳಾರಿ ದರ್ಬಾರ್’, ‘18 ಟು 25’ ಚಿತ್ರಗಳನ್ನು ನಿರ್ದೇಶಿಸಿರುವ ಸ್ಮೈಲ್ ಶ್ರೀನು ಈ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಬಿ. ರಾಮಾಂಜಿನಿ ಈ ಚಿತ್ರದ ಕಥೆ ಬರೆದು, ನಿರ್ಮಿಸುತ್ತಿದ್ದು, ಜಿಸಿಬಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಚಿತ್ರವು ತೆರೆಗೆ ಬರುತ್ತಿದೆ. ಬೆಂಗಳೂರು ಸುತ್ತ ಮುತ್ತ ಮೊದಲ ಹಂತದ ಚಿತ್ರೀಕರಣ ನಡೆದಿದ್ದು, ಸದ್ಯದಲ್ಲೇ ಎರಡನೇ ಹಂತದ ಚಿತ್ರೀಕರಣ ನಡೆಯಲಿದೆ.

ಚಿತ್ರಕ್ಕೆ ಚರಣ್ ಅರ್ಜುನ್ ಸಂಗೀತ, ರಿಯಲ್ ಸತೀಶ್ ಸಾಹಸ, ಡಾ. ವಿ. ನಾಗೇಂದ್ರ ಪ್ರಸಾದ್ ಸಾಹಿತ್ಯ, ವಿ. ಮುರಳಿ ನೃತ್ಯ ನಿರ್ದೇಶನವಿದೆ. ದೀಪಿಕಾ ಆರಾಧ್ಯ, ಪೃಥ್ವಿರಾಜ್, ಎಸ್. ನಾರಾಯಣ್, ಸಾಧು ಕೋಕಿಲ, ಪವಿತ್ರಾ ಲೋಕೇಶ್, ಸಂಗೀತಾ, ಆನಂದ್, ಭಾಗ್ಯಶ್ರೀ , ಶಿಲ್ಪಾ, ರವಿ ರಾಮ್ ಕುಮಾರ್ ತಾರಾ ಬಳಗದಲ್ಲಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.