ADVERTISEMENT

‘ನಿನ್ನ ಡ್ಯಾಡಿ ನಂಗೆ ಯಾವಾಗಿಂದ ಮಾವ ಆಗೋದು...’ ಕೇಳಿದ್ರು ಅಕ್ಷಿತ್‌ ಶಶಿಕುಮಾರ್‌

​ಪ್ರಜಾವಾಣಿ ವಾರ್ತೆ
Published 24 ಮೇ 2022, 8:50 IST
Last Updated 24 ಮೇ 2022, 8:50 IST
ಕೀರ್ತಿ ಕಲ್ಕೇರಿ, ಅಕ್ಷಿತ್‌ ಶಶಿಕುಮಾರ್‌
ಕೀರ್ತಿ ಕಲ್ಕೇರಿ, ಅಕ್ಷಿತ್‌ ಶಶಿಕುಮಾರ್‌   

‘ನಿನ್ನ ಡ್ಯಾಡಿ ನಂಗೆ ಯಾವಾಗಿಂದ ಮಾವ ಆಗೋದು...’ ಹೀಗೊಂದು ಹಾಡು ‘ಓ ಮೈ ಲವ್‌’ ಚಿತ್ರದಿಂದ ಕೇಳಿಬಂದಿದೆ. ಅಕ್ಷಿತ್‌ ಶಶಿಕುಮಾರ್‌, ಕೀರ್ತಿ ಕಲ್ಕೇರಿ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ನಿವೃತ್ತ ಐಪಿಎಸ್‌ ಅಧಿಕಾರಿ ಭಾಸ್ಕರ ರಾವ್‌ ಅವರು ಈ ಹಾಡಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸದ್ಯದಲ್ಲೇ ಬಿಡುಗಡೆಯಾಗಲಿರುವ ಈ ಸಿನಿಮಾಕ್ಕೆ ಕಥೆ ಬರೆದು ಜಿ.ಸಿ.ಬಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಜಿ.ರಾಮಾಂಜಿನಿ ಅವರು ನಿರ್ಮಿಸಿದ್ದಾರೆ. ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ಡೈರೆಕ್ಷನ್ ಮಾಡಿದ್ದಾರೆ ಸ್ಮೈಲ್ ಶ್ರೀನು. ಚಿತ್ರದ ಎಲ್ಲಾ ಹಾಡುಗಳಿಗೆ ಡಾ.ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯವಿದೆ. ಚರಣ್ ಅರ್ಜುನ್ ಸಂಗೀತ ಸಂಯೋಜಿಸಿದ್ದಾರೆ. ಮುರಳಿ ನೃತ್ಯ ನಿರ್ದೇಶನ ಹಾಡುಗಳಿಗಿದೆ. ಎಸ್.ನಾರಾಯಣ್, ಸಾಧುಕೋಕಿಲ, ದೇವಗಿಲ್, ಟೆನ್ನಿಸ್ ಕೃಷ್ಣ, ಪವಿತ್ರಾ ಲೋಕೇಶ್ ಹಾಗೂ ಸಂಗೀತಾ, ದೀಪಿಕಾ ಆರಾಧ್ಯ, ಪೃಥ್ವಿರಾಜ್, ಆನಂದ್, ಶಿಲ್ಪಾ ರವಿ, ಭಾಗ್ಯಶ್ರೀ, ರಾಮ್ ಕುಮಾರ್‌ ತಾರಾಗಣದಲ್ಲಿದ್ದಾರೆ.

ರಿಯಲ್ ಸ್ಟಾರ್‌ ಉಪೇಂದ್ರ ಅವರು ಈ ಚಿತ್ರದ ಮೊದಲ ಹಾಡನ್ನು ಬಿಡುಗಡೆ ಮಾಡಿದ್ದನ್ನು ಇಲ್ಲಿ ನೆನಪಿಸಬಹುದು. ಅದರ ಬೆನ್ನಲ್ಲೇ ಹರಿಬಿಟ್ಟ 4ಕೆ ಟೀಸರ್ ಕೂಡಾ ಸಿನಿಕ್ಷೇತ್ರದ ಘಟಾನುಘಟಿಗಳ ಮೆಚ್ಚುಗೆ ಪಡೆದಿದೆ. ಚಿತ್ರ ಶೀಘ್ರ ಬಿಡುಗಡೆಯಾಗಲಿದೆ ಎಂದಿದೆ ನಿರ್ಮಾಣ ತಂಡ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.