ADVERTISEMENT

ಒಂಬತ್ತನೇ ದಿಕ್ಕು: ದಯಾಳ್‌ರ 19ನೇ ಚಿತ್ರದಲ್ಲಿ ಲೂಸ್ ಮಾದ ಯೋಗಿ, ಅದಿತಿ ಪ್ರಭುದೇವ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2021, 19:30 IST
Last Updated 4 ನವೆಂಬರ್ 2021, 19:30 IST
ಅದಿತಿ ಪ್ರಭುದೇವ, ಯೋಗಿ
ಅದಿತಿ ಪ್ರಭುದೇವ, ಯೋಗಿ   

ವಿಶಿಷ್ಟ ಚಿತ್ರಗಳ ನಿರ್ದೇಶನಕ್ಕೆ ಹೆಸರಾದ ದಯಾಳ್‌ ಪದ್ಮನಾಭನ್‌ ಈಗ ‘ಒಂಬತ್ತನೇದಿಕ್ಕು’ ಹುಡುಕಿದ್ದಾರೆ.ಲೂಸ್ ಮಾದ ಯೋಗಿ ಅವರು ನಾಯಕ, ಅದಿತಿ ಪ್ರಭುದೇವ ನಾಯಕಿ. ಇತ್ತೀಚೆಗೆ ಟ್ರೇಲರ್‌ ಬಿಡುಗಡೆ ನಡೆದಿದೆ. ದಯಾಳ್‌ ಅವರ 19ನೇ ಚಿತ್ರವಿದು.

‘ಈ ಚಿತ್ರದ ಕಥೆ ಎರಡು ಕಾಲಘಟ್ಟದಲ್ಲಿ ಸಾಗುತ್ತದೆ. ನಮಗೆ ಸಿಗುವುದಿಲ್ಲ ಎಂದು ಗೊತ್ತಿದ್ದರೂ ನಾವು ಮತ್ತೊಂದು ದಾರಿಯಲ್ಲಿ ಏನನ್ನೋ ಹುಡುಕುತ್ತಾ ಹೋಗುತ್ತೇವೆ. ಅದು ಮತ್ತೊಂದು ಕಡೆ ಸಿಗುತ್ತದೆ. ಅದಕ್ಕೆ ನಾನು ಈ ಶೀರ್ಷಿಕೆ ಆಯ್ಕೆ ಮಾಡಿಕೊಂಡೆ. ಮೂರು ಸಾಹಸ ಸನ್ನಿವೇಶಗಳಿವೆ. ಲೂಸ್ ಮಾದ ಯೋಗಿ ಅವರಂತಹ ಉತ್ತಮ ಕಲಾವಿದರೊಡನೆ ಕೆಲಸಮಾಡಿದ್ದು, ಖುಷಿ ತಂದಿದೆ’ ಎಂದರು.

ಸಾಯಿಕುಮಾರ್, ಹಿರಿಯನಟ ಅಶೋಕ್, ಸುಂದರ್, ರಮೇಶ್ ಭಟ್, ಶೃತಿ ನಾಯಕ್, ಪ್ರಶಾಂತ್ ಸಿದ್ದಿ, ಮುನಿ ತಾರಾಗಣದಲ್ಲಿದ್ದಾರೆ. ನ. 19ರಂದು ಚಿತ್ರ ಬಿಡುಗಡೆ ಆಗಲಿದೆ.

ADVERTISEMENT

ಒಳ್ಳೆಯ ವಿಷಯಾಧರಿತ ಚಿತ್ರವಿದು. ಇತ್ತೀಚೆಗೆ ಸಿನಿಮಾ ನೋಡಿದೆ. ತುಂಬಾ ಚೆನ್ನಾಗಿದೆ. ಪ್ರೇಕ್ಷಕರು ನಮ್ಮ ಸಿನಿಮಾ ಇಷ್ಟಪಡುವುದರಲ್ಲಿ ಯಾವುದೇ ಸಂದೇಹವಿಲ್ಲ’ ಎಂದರು ನಾಯಕ ಲೂಸ್ ಮಾದ ಯೋಗಿ.

‘ನಾನು ದಯಾಳ್ ಅವರ ಜೊತೆ ಈ‌ ಹಿಂದೆ ‘ರಂಗನಾಯಕಿ’ ಚಿತ್ರದಲ್ಲಿ ಅಭಿನಯಿಸಿದ್ದೇನೆ. ಈ ಚಿತ್ರದಲ್ಲಿ ನನ್ನದು ವಿಭಿನ್ನ ಪಾತ್ರ. ‌ದಯಾಳ್ ಅವರು ನಿಗದಿಯಂತೆ ಸಿನಿಮಾ‌ ಮಾಡುತ್ತಾರೆ’ ಎಂದರು ನಾಯಕಿ‌ ಅದಿತಿ. ಮಣಿಕಾಂತ್ ಕದ್ರಿ ಸಂಗೀತ ನೀಡಿರುವ ಈ ಚಿತ್ರಕ್ಕೆ ರಾಕೇಶ್ ಛಾಯಾಗ್ರಹಣ, ಪ್ರೀತಿ ಮೋಹನ್ ಸಂಕಲನವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.