
ಪ್ರಜಾವಾಣಿ ವಾರ್ತೆ
ಬಹುತೇಕ ಹೊಸಬರಿಂದಲೇ ಕೂಡಿರುವ ‘ಆಪರೇಶನ್ ಡಿ’ ಚಿತ್ರ ಫೆಬ್ರುವರಿಯಲ್ಲಿ ತೆರೆಗೆ ಬರಲಿದೆ. ತಿರುಮಲೇಶ್ ವಿ ನಿರ್ದೇಶನದ ಚಿತ್ರಕ್ಕೆ ಅದ್ವಿತ ಫಿಲ್ಮ್ ಫ್ಯಾಕ್ಟರಿ ಬಂಡವಾಳ ಹೂಡಿದೆ.
‘ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಮರ್ಡರ್ ಮಿಸ್ಟರಿ ಕಥೆ ಆಧರಿಸಿದ ಚಿತ್ರ. ಬಹುತೇಕ ರಂಗಭೂಮಿ ಕಲಾವಿದರೆ ಇದರಲ್ಲಿ ಅಭಿನಯಿಸಿದ್ದಾರೆ. ಫೆಬ್ರುವರಿ ಮೊದಲ ವಾರದಲ್ಲಿ ಚಿತ್ರ ತೆರೆಗೆ ಬರಲಿದೆ’ ಎಂದರು ನಿರ್ದೇಶಕ.
ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ವೇದಿಕ ಹಾಗೂ ಸಂತೋಷ್ ಆರ್ಮುಗಮ್ ಸಂಗೀತ ನಿರ್ದೇಶನವಿದೆ. ಕಾರ್ತಿಕ್ ಪ್ರಸಾದ್ ಛಾಯಾಚಿತ್ರಗ್ರಹಣ, ವಿಕ್ರಮ್ ಶ್ರೀಧರ್ ಸಂಕಲನವಿದೆ. ರುದ್ರೇಶ್ ಬೂದನೂರು, ಸುಹಾಸ್ ಆತ್ರೇಯ, ವಿನೋದ್ ದೇವ್, ಸ್ನೇಹ ಭಟ್, ಇಂಚರ ಭರತ್ ರಾಜ್ ಮುಂತಾದವರು ನಟಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.