ADVERTISEMENT

shivarajkumar: ಆಪರೇಷನ್‌ ಸೆಟ್‌ನಿಂದ ಹೊಸ ಫೋಟೋಸ್‌

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2025, 22:30 IST
Last Updated 9 ಡಿಸೆಂಬರ್ 2025, 22:30 IST
ಧನಂಜಯ 
ಧನಂಜಯ    

‘ಸಪ್ತಸಾಗರದಾಚೆ ಎಲ್ಲೋ’ ಸಿನಿಮಾ ನಿರ್ದೇಶಕ ಹೇಮಂತ್ ಎಂ.ರಾವ್‌ ನಿರ್ದೇಶನದ ‘666 ಆಪರೇಷನ್ ಡ್ರೀಮ್ ಥಿಯೇಟರ್’ ಸಿನಿಮಾದ ಶೂಟಿಂಗ್‌ ಬೆಂಗಳೂರಿನಲ್ಲಿ ಭರದಿಂದ ಸಾಗುತ್ತಿದೆ. ಇತ್ತೀಚೆಗೆ ಪೂರ್ಣಗೊಂಡ ಒಂದು ಹಂತದ ಶೂಟಿಂಗ್‌ನ ಫೋಟೊಗಳನ್ನು ಹೇಮಂತ್‌ ಹಂಚಿಕೊಂಡಿದ್ದಾರೆ.

ಇವುಗಳಲ್ಲಿ ನಟರಾದ ಶಿವರಾಜ್‌ಕುಮಾರ್‌ ಹಾಗೂ ಧನಂಜಯ ಭಿನ್ನ ಲುಕ್‌ನಲ್ಲಿ ಮಿಂಚಿದ್ದಾರೆ. ಶೀಘ್ರದಲ್ಲೇ ಮತ್ತೊಂದು ಹಂತದ ಶೂಟಿಂಗ್‌ ಆರಂಭವಾಗಲಿದೆ ಎಂದು ಹೇಮಂತ್‌ ತಿಳಿಸಿದ್ದಾರೆ. ಬೆಂಗಳೂರಿನ ಕಂಠೀರವ ಸ್ಟುಡಿಯೊದಲ್ಲಿ ಹಾಕಲಾಗಿರುವ ಸೆಟ್‌ನಲ್ಲಿ ಚಿತ್ರೀಕರಣ ನಡೆಯುತ್ತಿದೆ. ಚಿತ್ರದಲ್ಲಿ ನಾಯಕಿಯಾಗಿ ಬಹುಭಾಷಾ ನಟಿ ಪ್ರಿಯಾಂಕಾ ಮೋಹನ್‌ ಬಣ್ಣಹಚ್ಚಿದ್ದಾರೆ. 

ಚಿತ್ರಕ್ಕಾಗಿ 70ರ ದಶಕದ ಸಿನಿಮಾಗಳಲ್ಲಿ ಬಳಸುತ್ತಿದ್ದ ವಸ್ತ್ರವಿನ್ಯಾಸದಿಂದ ಹಿಡಿದು ಆ ಕಾಲದ ಲೆನ್ಸ್‌ಗಳನ್ನೂ ಚಿತ್ರತಂಡ ಶೂಟಿಂಗ್‌ಗೆ ಬಳಸಿಕೊಂಡಿದೆ. ಧನಂಜಯ ಮುಖ್ಯಪಾತ್ರದಲ್ಲಿ ನಟಿಸಿರುವ ಈ ಚಿತ್ರವನ್ನು ವೈಶಾಖ್ ಜೆ.ಗೌಡ ಅವರ ವೈಶಾಖ್ ಜೆ ಫಿಲ್ಮ್ಸ್ ನಿರ್ಮಿಸಿದ್ದು, ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಏಕಕಾಲದಲ್ಲಿ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ಯೋಚಿಸುತ್ತಿದೆ.

ADVERTISEMENT
ಶಿವರಾಜ್‌ಕುಮಾರ್‌ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.