ADVERTISEMENT

ಭಾರತದ ನಮಿತ್ ಮಲ್ಹೋತ್ರಾರ ಡಿಎನ್ಇಜಿ ಸಂಸ್ಥೆಗೂ ಆಸ್ಕರ್ ಪುರಸ್ಕಾರ

ಡ್ಯೂನ್ ಸಿನಿಮಾಕ್ಕೆ ನೀಡಿದ ಅಭೂತಪೂರ್ವ ವಿಶ್ಯುವಲ್ ಎಫೆಕ್ಟ್‌ಗಾಗಿ ಈ ಗರಿ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2022, 14:19 IST
Last Updated 28 ಮಾರ್ಚ್ 2022, 14:19 IST
ನಮಿತ್ ಮಲ್ಹೋತ್ರಾ
ನಮಿತ್ ಮಲ್ಹೋತ್ರಾ   

ಲಾಸ್ ಏಂಜಲಿಸ್‌: ಅಮೆರಿಕ ವೈಜ್ಞಾನಿಕ ಕಾಲ್ಪನಿಕ 'ಡ್ಯೂನ್' ಚಿತ್ರಕ್ಕೆ ಅತ್ಯುತ್ತಮ ವಿಷುವಲ್ ಎಫೆಕ್ಟ್ ನೀಡಿದ ಭಾರತ ಮೂಲದ ಚಿತ್ರೋದ್ಯಮಿ ನಮಿತ್ ಮಲ್ಹೋತ್ರಾ ಅವರ ಒಡೆತನದ'ಡಿಎನ್ಇಜಿ' ಕಂಪನಿಯು ಪ್ರತಿಷ್ಠಿತ ಆಸ್ಕರ್ ಪುರಸ್ಕಾರವನ್ನು ಮುಡಿಗೇರಿಸಿಕೊಂಡಿದೆ. ಡೆನಿಸ್ ವಿಲೆನ್ಯೂವ್ ಅವರ ನಿರ್ದೇಶನದ 'ಡ್ಯೂನ್' ಚಿತ್ರವು 2022ನೇ ಸಾಲಿನ ಅತಿಹೆಚ್ಚು ಆಸ್ಕರ್ ಪುರಸ್ಕಾರಕ್ಕೆ ಭಾಜನವಾಗಿದೆ.

ಮಲ್ಹೋತ್ರಾ ಅವರು ಅಧ್ಯಕ್ಷ ಮತ್ತು ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ(ಸಿಇಒ) ಆಗಿರುವ ಡಿಎನ್ಇಜಿ ಮತ್ತು ವಿಎಫ್ಎಕ್ಸ್ , ‘ಡ್ಯೂನ್’ ಚಿತ್ರಕ್ಕೆ ಪರಿಣಾಮಕಾರಿಯಾದ 'ವಿಷುವಲ್ ಎಫೆಕ್ಟ್' ನೀಡಿದ್ದವು.

ಸಿನಿಮಾದಲ್ಲಿ ವಿಷುವಲ್ ಎಫೆಕ್ಟ್ ಮುಖಾಂತರವೂ ಕಥೆಯನ್ನು ಹೇಳಬಹುದು ಎಂಬ ಹೊಸ ಮೈಲುಗಲ್ಲನ್ನು ಡ್ಯೂನ್ ಚಿತ್ರ ನಿರ್ಮಿಸಿದೆ. ಈ ಪುರಸ್ಕಾರಕ್ಕೆ ಡಿಎನ್ಇಜಿ ಕಂಪನಿ ಭಾಜನವಾಗಿರುವ ಹಿನ್ನೆಲೆಯಲ್ಲಿ ಅಕಾಡೆಮಿ ಆಫ್ ಮೋಷನ್ ಪಿಕ್ಚರ್ಸ್ ಆರ್ಟ್ಸ್ ಅಂಡ್ ಸೈನ್ಸಸ್‌ಗೆ ಅಭಾರಿಯಾಗಿದ್ದೇನೆ. ಇದೊಂದು ಹೆಮ್ಮೆಯ ಸಂಗತಿ ಎಂದು ಮಲ್ಹೋತ್ರಾ ಅವರು ಪ್ರತಿಕ್ರಿಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.