Param Sundari Trailer: ಪರಮ ಸುಂದರಿಯಾಗಿ ತೆರೆಗೆ ಬರಲು ಸಜ್ಜಾದ ಜಾಹ್ನವಿ ಕಪೂರ್
ಮುಂಬೈ: ಸಿದ್ಧಾರ್ಥ್ ಮಲ್ಹೋತ್ರಾ, ಜಾಹ್ನವಿ ಕಪೂರ್ ಅಭಿನಯನದ ‘ಪರಮ ಸುಂದರಿ‘ ಚಿತ್ರವು ತೆರೆ ಕಾಣಲು ಸಜ್ಜಾಗಿದೆ.
ಈ ಹಿನ್ನೆಲೆಯಲ್ಲಿ ಚಿತ್ರದ ಟ್ರೇಲರ್ ಬಿಡುಗಡೆಗೊಂಡಿದ್ದ ಅಭಿಮಾನಿಗಳ ಗಮನ ಸೆಳೆದಿದೆ. ಇದೇ ಆಗಸ್ಟ್ 29ಕ್ಕೆ ಈ ಸಿನಿಮಾ ಬಿಡುಗಡೆಯಾಗಲಿದೆ.
‘ದಸ್ವಿ‘ ಖ್ಯಾತಿಯ ತುಷಾರ್ ಜಲೋಟಾ ಅವರು ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಪ್ರೇಮಕಥೆ ಜತೆಗೆ ಸಂಘರ್ಷವೂ ಇರಲಿದ್ದು, ಚಿತ್ರ ವಿಭಿನ್ನವಾಗಿ ಮೂಡಿಬರಲಿದೆ ಎಂದು ಚಿತ್ರತಂಡ ಹೇಳಿದೆ.
Maddock films ಚಿತ್ರ ನಿರ್ಮಾಣ ಸಂಸ್ಥೆ ಈ ಚಿತ್ರವನ್ನು ನಿರ್ಮಿಸಿದೆ. ಕೇರಳದ ಸುಂದರ ಸ್ಥಳಗಳು ಸೇರಿದಂತೆ ವಿವಿಧ ಕಡೆ ಚಿತ್ರೀಕರಣ ನಡೆದಿದೆ.
ಇತ್ತೀಚೆಗೆ ಜೂನಿಯರ್ ಎನ್‌ಟಿಆರ್ ಜತೆಯಾಗಿ ‘ದೇವರ’ ಚಿತ್ರದ ಮೂಲಕ ಬಾಲಿವುಡ್ ನಟಿ ಜಾಹ್ನವಿ ಕಪೂರ್ ವಿಶೇಷ ಪಾತ್ರದಲ್ಲಿ ಸದ್ದು ಮಾಡಿದ್ದರು.
ಪರಮ ಸುಂದರಿಯಾಗಿ ಜಾಹ್ನವಿ ಕಪೂರ್ ಮೋಡಿ ಮಾಡಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.