
ಪ್ರಜಾವಾಣಿ ವಾರ್ತೆ
ಪಾರ್ವತಿ ಅವರ ನಟನೆಯ ನಿರೀಕ್ಷಿತ ತಮಿಳು ಥ್ರಿಲ್ಲರ್ ‘ಊಣ್ ಪರವೈಲ್’ ಐರ್ಲೆಂಡ್‌ನ ಡಬ್ಲಿನ್‌ನಲ್ಲಿ ನಡೆದ ಸಿನಿಮೋತ್ಸವದಲ್ಲಿ ಅಧಿಕೃತವಾಗಿ ಬಿಡುಗಡೆಯಾಯಿತು.
ತಾಲ್ ಮತ್ತು ಕಹೋ ನಾ ಪ್ಯಾರ್ ಹೈ ಖ್ಯಾತಿಯ ಛಾಯಾಗ್ರಾಹಕ ಕಬೀರ್ ಲಾಲ್ ನಿರ್ದೇಶಿಸಿದ ಈ ಚಿತ್ರದಲ್ಲಿ ಪಾರ್ವತಿ ನಾಯರ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಭವ್ಯ ಮತ್ತು ದಿವ್ಯಾ ಎಂಬ ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ನಿಗೂಢ ಸಂದರ್ಭಗಳಲ್ಲಿ ದುರಂತ ಅಂತ್ಯ ಕಾಣುವ ದೃಷ್ಟಿಹೀನ ಹುಡುಗಿಯ ಪಾತ್ರವನ್ನು ಪಾರ್ವತಿ ನಿರ್ವಹಿಸಿದ್ದಾರೆ.
ಊಣ್ ಪರವೈಲ್ ಮಹಿಳಾ ಪ್ರಧಾನ ಚಿತ್ರವಾಗಿದ್ದು, ಪಾರ್ವತಿ ನಾಯರ್ ಅವರ ಗಮನಾರ್ಹ ಅಭಿನಯವಿದೆ.
ಅಜಯ್ ಕುಮಾರ್ ಸಿಂಗ್ ಮತ್ತು ರೇಖಾ ಸಿಂಗ್ ನಿರ್ಮಿಸಿದ ತಮಿಳು ಥ್ರಿಲ್ಲರ್ ಇದಾಗಿದೆ.
ಈ ಸಿನಿಮಾದ ಕಥಾಹಂದರವು ಪ್ರೇಕ್ಷಕನನ್ನು ಹಿಡಿದು ಕೂರಿಸುತ್ತದೆ ಎಂದು ಚಿತ್ರತಂಡ ಅಭಿಪ್ರಾಯಪಟ್ಟಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.