ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ನಟ ಪವನ್ ಕಲ್ಯಾಣ್ ಸಿನಿಕ್ಷೇತ್ರಕ್ಕೆ ವಾಪಸ್ಸಾಗಲಿದ್ದಾರೆ ಎಂಬ ಗಾಳಿಸುದ್ದಿಗಳು ಹರಿದಾಡುತ್ತಿವೆ.
ಈಗ ನಟ ಚಿರಂಜೀವಿ ಪವನ್ ಕಲ್ಯಾಣ್ ಸಿನಿಕ್ಷೇತ್ರಕ್ಕೆ ವಾಪಸ್ಸಾಗುವ ಬಗ್ಗೆ ಸುಳಿವು ನೀಡಿದ್ದಾರೆ. ಮಾಧ್ಯಮ ಸಂದರ್ಶನವೊಂದರಲ್ಲಿ ‘ಸೈರಾ ನರಸಿಂಹ ರೆಡ್ಡಿ’ ಸಿನಿಮಾ ನಿರ್ಮಾಣ ಮಾಡಿದ ಮಗ ರಾಮ್ ಚರಣ್ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿದ ಅವರು, ಅದೇ ಸಂದರ್ಭದಲ್ಲಿ ಸಹೋದರ ಪವನ್ ಕಲ್ಯಾಣ್ ಸಿನಿಮಾವನ್ನೂ ರಾಮ್ ಚರಣ್ ತೇಜಾ ನಿರ್ದೇಶನ ಮಾಡಿದರೆ ತಮಗೆ ಖುಷಿಯಾಗುತ್ತದೆ ಎಂದು ಹೇಳಿಕೊಂಡಿದ್ದರು.
ಹಾಗಾಗಿ ಪವನ್ ಕಲ್ಯಾಣ್ ಸಿನಿಮಾವನ್ನೂ ರಾಮ್ ಚರಣ್ ನಿರ್ಮಾಣ ಮಾಡಲಿದ್ದಾರೆ ಎಂಬ ಸುದ್ದಿಗಳು ಟಾಲಿವುಡ್‌ನಿಂದ ಕೇಳಿಬರುತ್ತಿದೆ. ಆದರೆ ಇದೆಲ್ಲವೂ ಪವನ್ ಕಲ್ಯಾಣ್ ಅವರ ನಿರ್ಧಾರಗಳನ್ನೇ ಅವಲಂಭಿಸಿವೆ. ಸಿನಿಕ್ಷೇತ್ರಕ್ಕೆ ವಾಪಸ್ಸಾದರೂ ನಟನೆ ಹಾಗೂ ರಾಜಕೀಯ ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು ಹೋಗಬೇಕು ಎಂಬುದು ಪವನ್ ಕಲ್ಯಾಣ್ ಅವರ ಲೆಕ್ಕಾಚಾರವಂತೆ.
ತಮ್ಮ ಬ್ಯಾನರ್ ಹಾಗೂ ತಮ್ಮ ನಿರ್ದೇಶನದಲ್ಲಿ ನಟಿಸುವಂತೆ ನಿರ್ಮಾಪಕ ದಿಲ್ ರಾಜು ಅವರು ಪವನ್ ಕಲ್ಯಾಣ್ ಅವರನ್ನು ಕೇಳಿಕೊಂಡಿದ್ದರು.ರಾಮ್ ಚರಣ್, ಎಸ್. ಎಸ್. ರಾಜಮೌಳಿ ಅವರ ‘ಆರ್‌ಆರ್‌ಆರ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಈ ಸಿನಿಮಾವು 2020ರ ಜುಲೈ 30ಕ್ಕೆ ಬಿಡುಗಡೆಯಾಗಲಿದೆ. ಈ ಸಿನಿಮಾ ಮುಗಿದ ಬಳಿಕ ತಮ್ಮ ತಂದೆ ಜೊತೆ ಮತ್ತೊಂದು ಸಿನಿಮಾದಲ್ಲಿ ರಾಮ್ ಚರಣ್ ನಟಿಸಲಿದ್ದಾರೆ. ಈ ಹೊಸ ಸಿನಿಮಾದ ಬಗ್ಗೆ ಘೋಷಣೆ ಮಾಡಬೇಕಷ್ಟೇ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.