ADVERTISEMENT

‘ಪಿಂಕ್‌’ ರಿಮೇಕ್‌ನಲ್ಲಿ ಪವನ್‌ ಕಲ್ಯಾಣ್‌

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2019, 19:40 IST
Last Updated 11 ನವೆಂಬರ್ 2019, 19:40 IST
   

ಅಮಿತಾಭ್‌ ಬಚ್ಚನ್‌, ತಾಪ್ಸಿ ಪನ್ನು ಮುಖ್ಯಪಾತ್ರದಲ್ಲಿ ನಟಿಸಿರುವ, ಭಾರಿ ಪ್ರಶಂಸೆ ಗಳಿಸಿದ್ದ ‘ಪಿಂಕ್‌’ ಚಿತ್ರ ತೆಲುಗಿಗೆ ರಿಮೇಕ್‌ ಆಗುತ್ತಿದ್ದು, ಈ ಚಿತ್ರದ ಮೂಲಕ ನಟ ಪವನ್‌ ಕಲ್ಯಾಣ್‌ ಟಾಲಿವುಡ್‌ಗೆ ಮತ್ತೆ ಕಮ್‌ಬ್ಯಾಕ್‌ ಮಾಡುತ್ತಿದ್ದಾರೆ.

ಪವನ್‌ ಕಲ್ಯಾಣ್‌ ಅವರು ವೇಣು ಶ್ರೀರಾಮ್‌ ಅವರು ನಿರ್ದೇಶನ ಮಾಡುತ್ತಿರುವ ಈ ರಿಮೇಕ್‌ ಚಿತ್ರದಲ್ಲಿ. ಮೂಲ ಚಿತ್ರದಲ್ಲಿ ಅಮಿತಾಭ್‌ ಮಾಡಿರುವ ಪಾತ್ರವನ್ನು ನಿರ್ವಹಿಸಲಿದ್ದಾರೆ.

‘ಪಿಂಕ್‌’ ಚಿತ್ರದ ತಮಿಳು ರಿಮೇಕ್‌ ‘ನೇರ್ಕೊಂಡ ಪಾರ್ವೈ’ ಸಿನಿಮಾವು ಕಾಲಿವುಡ್‌ನಲ್ಲಿ ಭಾರಿ ಹಿಟ್‌ ಆಗಿತ್ತು. ಈ ಚಿತ್ರವನ್ನು ಬೋನಿ ಕಪೂರ್‌ ನಿರ್ಮಾಣ ಮಾಡಿದ್ದರು. ಈಗ ತೆಲುಗು ರಿಮೇಕ್‌ ಚಿತ್ರವನ್ನೂ ಬೋನಿ ಕಪೂರ್‌ ಅವರೇ ನಿರ್ಮಾಣಮಾಡಲಿದ್ದಾರೆ.

ADVERTISEMENT

ಈ ಚಿತ್ರಕ್ಕೆ ಪವನ್‌ ಕಲ್ಯಾಣ್‌ 20 ದಿನಗಳ ಕಾಲ್‌ ಶೀಟ್‌ ನೀಡಿದ್ದಾರೆ. ನವೆಂಬರ್‌ ಅಂತ್ಯದಲ್ಲಿ ಶೂಟಿಂಗ್‌ ಆರಂಭವಾಗಲಿದೆ ಎನ್ನಲಾಗಿದೆ.

ರಾಜಕೀಯ ಪ್ರವೇಶ ಮಾಡಿದ್ದರಿಂದ ಪವನ್‌ ಕಲ್ಯಾಣ್‌ ಸಿನಿಕ್ಷೇತ್ರದಿಂದ ಈಗ ಸ್ವಲ್ಪ ದೂರ ಇದ್ದರು. ಈಗ ರಾಜಕೀಯದಿಂದ ಸ್ವಲ್ಪ ಬಿಡುವು ಪಡೆದು ಟಾಲಿವುಡ್‌ಗೆ ವಾಪಸ್ಸಾಗಲಿದ್ದಾರೆ. ‘ಅಜ್ಞಾತವಾಸಿ’ ಪವನ್‌ ಕಲ್ಯಾಣ್‌ ನಟನೆಯ ಕೊನೆಯ ಚಿತ್ರ. ಇದು 2018ರಲ್ಲಿ ಬಿಡುಗಡೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.