ADVERTISEMENT

ಟೀಸರ್‌ ನೋಡಿ: ‘ಹರಿ ಹರ ವೀರಮಲ್ಲು’ವಾಗಿ ಬಂದ ಪವನ್‌ ಕಲ್ಯಾಣ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಸೆಪ್ಟೆಂಬರ್ 2022, 6:23 IST
Last Updated 3 ಸೆಪ್ಟೆಂಬರ್ 2022, 6:23 IST
ಪವನ್‌ ಕಲ್ಯಾಣ್‌
ಪವನ್‌ ಕಲ್ಯಾಣ್‌   

ಹೈದರಾಬಾದ್‌: ನಿನ್ನೆ ಹುಟ್ಟುಹಬ್ಬ ಆಚರಿಸಿಕೊಂಡ ಪವರ್‌ ಸ್ಟಾರ್‌ ಪವನ್‌ ಕಲ್ಯಾಣ್‌ ಅವರ ಅಭಿಮಾನಿಗಳಿಗೆ ‘ಹರಿ ಹರ ವೀರಮಲ್ಲು’ ಚಿತ್ರತಂಡ ಭರ್ಜರಿ ಗಿಫ್ಟ್‌ ಕೊಟ್ಟಿದೆ.

ಟಾಲಿವುಡ್‌ನ ಸ್ಟಾರ್‌ ನಟನಿಗೆ ಬಾಲಿವುಡ್‌ ಹಾಗೂ ದಕ್ಷಿಣ ಭಾರತದ ಸಿನಿಮಾ ಸೆಲೆಬ್ರಿಟಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಜನ್ಮದಿನದ ಶುಭಾಶಯಗಳನ್ನು ಕೋರಿದ್ದಾರೆ.

ಈ ಸಂದರ್ಭದಲ್ಲಿ ‘ಹರಿ ಹರ ವೀರಮಲ್ಲು’ ಚಿತ್ರತಂಡ ಟೀಸರ್ ಬಿಡುಗಡೆ ಮಾಡಿದೆ. ಬಿಡುಗಡೆಯಾಗಿ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀಕ್ಷಣೆ ಕಂಡಿದೆ. ಇದು ಮಾಸ್‌ ಸಿನಿಮಾ ಎಂಬುದಕ್ಕೆ ಟೀಸರ್‌ನಲ್ಲಿರುವ ಕುಸ್ತಿ ಪಟ್ಟುಗಳೇ ಸಾಕ್ಷಿಯಾಗಿವೆ.

ADVERTISEMENT

ಒಂದು ನಿಮಿಷದ ಟೀಸರ್ ಸಂಪೂರ್ಣ ಮಾಸ್ ಆಗಿದೆ. ಪೈಲ್ವಾನ್ ರೀತಿಯಲ್ಲಿ ಪವನ್‌ ಕಲ್ಯಾಣ್‌ ತೊಡೆ ತಟ್ಟಿ ಮಿಂಚಿದ್ದಾರೆ. ಎಂ.ಎಂ. ಕೀರವಾಣಿ ಅವರ ಸಂಗೀತ ಗಮನ ಸೆಳೆದಿದೆ. ಈ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ನಿರೀಕ್ಷೆ ಇದೆ.

‘ಹರಿ ಹರ ವೀರಮಲ್ಲು’ ಚಿತ್ರಕ್ಕೆ ಜಾಗರಲಮುಡಿ ರಾಧಾಕೃಷ್ಣ ನಿರ್ದೇಶನ ಮಾಡುತ್ತಿದ್ದು, ದಯಾಕರ್ ರಾವ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಈಗಾಗಲೇ ಸಿನಿಮಾದ ಕೆಲಸಗಳು ಭರದಿಂದ ನಡೆಯುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.