
ಕಾರ್ತಿಕ್ ರಾಜನ್ ನಿರ್ದೇಶನದ, ಲಿಖಿತ್ ಎಂ.ಎನ್. ನಟಿಸಿರುವ ‘ಪಿಯೊಟ್’ ಸಿನಿಮಾ ಇಂದು(ಡಿ.12) ತೆರೆ ಕಾಣುತ್ತಿದೆ.
‘ಸದಾ ಮದ್ಯಪಾನ ಮಾಡುತ್ತಿರುವವರನ್ನು ಪಿಯೊಟ್ ಎನ್ನುತ್ತಾರೆ. ಈ ರೀತಿ ಕುಡಿಯುವುದರಿಂದ ಏನೆಲ್ಲಾ ಸಮಸ್ಯೆ ಆಗುತ್ತದೆ, ಕುಡಿತ ಬಿಡುವುದಕ್ಕೆ ಮನಸ್ಸು ಮಾಡುವಾಗ ಎಷ್ಟೆಲ್ಲಾ ಕಷ್ಟವಾಗುತ್ತೆ ಎಂಬ ಸಂದೇಶವನ್ನಿಟ್ಟುಕೊಂಡು ಈ ಸಿನಿಮಾವಿದೆ’ ಎಂದಿದೆ ಚಿತ್ರತಂಡ.
‘ಪಿಯೊಟ್ ಎಂದು ಬೈಯುತ್ತೇವೆ. ಇದೊಂದು ಲೇಬಲ್. ಕುಡುಕರನ್ನ ಪಿಯೊಟ್ ಎಂದು ಕರೆಯುತ್ತಾರೆ. ಚಿಕ್ಕ ವಯಸ್ಸಿನಿಂದಲೇ ಮದ್ಯಪಾನದ ಚಟ ಹತ್ತಿಸಿಕೊಂಡವರನ್ನು ನೋಡಿದ್ದೇನೆ. ಅವರನ್ನ ಅರ್ಥ ಮಾಡಿಕೊಳ್ಳುವುದಕ್ಕೂ ಪ್ರಯತ್ನ ಪಟ್ಟಿದ್ದೇನೆ. ಏಕೆ ಕುಡೀತಾರೆ, ಅವರಲ್ಲಿ ಏನು ನೋವಿದೆ, ಅದನ್ನೆಲ್ಲಾ ತೋರಿಸಬೇಕು ಎಂಬುದಕ್ಕೆ ಈ ವಿಷಯವನ್ನ ತೆಗೆದುಕೊಂಡೆವು’ ಎನ್ನುತ್ತಾರೆ ನಿರ್ದೇಶಕ ಕಾರ್ತಿಕ್.
‘ನಾನು ಸಿನಿಮಾದಲ್ಲಿ ಕುಡಿಯುವ ನಟನೆ ಮಾಡಿದ್ದೇನಷ್ಟೇ. ಮದ್ಯವರ್ಜನ ಶಿಬಿರಗಳಲ್ಲಿ ಚಿತ್ರೀಕರಣ ನಡೆಸಿದ್ದು ಒಂದು ಹೊಸ ಅನುಭವ. ಇಲ್ಲಿವರೆಗೂ ನನಗೆ ಕುಡಿಯೋದಕ್ಕೆ ಮನಸ್ಸೇ ಬಂದಿಲ್ಲ. ಮದ್ಯವನ್ನು ಮುಟ್ಟೇ ಇಲ್ಲ’ ಎಂದಿದ್ದಾರೆ ಲಿಖಿತ್. ಮರಾಠಿ, ಮಲಯಾಳ, ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಅಶ್ವಿನಿ ಚಾವರೆ ನಾಯಕಿಯಾಗಿದ್ದಾರೆ. ಇದು ಇವರ ಚೊಚ್ಚಲ ಕನ್ನಡ ಸಿನಿಮಾ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.