
ಪ್ರಜಾವಾಣಿ ವಾರ್ತೆ
ಅಶ್ವಿನಿ ಚಾವರೆ
ಕುಡುಕನೊಬ್ಬನ ಕುರಿತಾದ ಕಥೆ ಹೊಂದಿರುವ ‘ಪಿಯೊಟು’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ಚಿತ್ರಕ್ಕೆ ಕಾರ್ತಿಕ್ ರಾಜ್ ನಿರ್ದೇಶನವಿದೆ.
‘ಕುಡಿಯುವುದಕ್ಕೆ ಅವರಿಗೆ ಸಮಯವೇ ಬೇಕಿಲ್ಲ, ಸದಾ ಕುಡಿಯುವುದರ ಕಡೆಗೆ ಗಮನ ಹರಿಸುವವರನ್ನು ಪಿಯೊಟ್ ಎನ್ನುತ್ತಾರೆ. ಆ ರೀತಿ ಕುಡಿಯುವುದರಿಂದ ಏನೆಲ್ಲಾ ಸಮಸ್ಯೆಗಳಾಗುತ್ತವೆ, ಅವರು ಕುಡಿತ ಬಿಡುವುದಕ್ಕೆ ಮನಸು ಮಾಡಿದಾಗ ಎಷ್ಟೆಲ್ಲಾ ಕಷ್ಟವಾಗುತ್ತದೆ ಎಂಬುದರ ಸುತ್ತ ಸಾಗುವ ಕಥೆಯಿದು. ಕೆಲವರು ಚಿಕ್ಕ ವಯಸ್ಸಿನಿಂದ ಕುಡಿತದ ಚಟಕ್ಕೆ ಒಳಗಾಗಿರುತ್ತಾರೆ. ಯಾಕೆ ಕುಡಿಯುತ್ತಾರೆ?, ಅವರಲ್ಲಿ ಏನು ನೋವಿದೆ? ಎಂಬುದನ್ನು ಚಿತ್ರದಲ್ಲಿ ತೋರಿಸಿದ್ದೇವೆ’ ಎಂದರು ನಿರ್ದೇಶಕ.
ಲಿಖಿತ್ ಚಿತ್ರದ ನಾಯಕ. ಈಗಾಗಲೇ ಮರಾಠಿ, ಮಲಯಾಳ, ಹಿಂದಿ ಸಿನಿಮಾಗಳಲ್ಲಿ ನಟಿಸಿರುವ ಅಶ್ವಿನಿ ಚಾವರೆ ನಾಯಕಿ. ಗ್ರೇಸ್ ಫಿಲ್ಮ್ ಕಂಪನಿ ಬಂಡವಾಳ ಹೂಡಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.