ADVERTISEMENT

ವಿಮಾನದಲ್ಲಿ ಪೂಜಾ ಹೆಗ್ಡೆಗೆ ಕೆಟ್ಟ ಅನುಭವ: ನಟಿಯ ಕ್ಷಮೆ ಕೇಳಿದ ಇಂಡಿಗೊ ಸಂಸ್ಥೆ

​ಪ್ರಜಾವಾಣಿ ವಾರ್ತೆ
Published 9 ಜೂನ್ 2022, 12:29 IST
Last Updated 9 ಜೂನ್ 2022, 12:29 IST
ಪೂಜಾ ಹೆಗ್ಡೆ
ಪೂಜಾ ಹೆಗ್ಡೆ   

ಬೆಂಗಳೂರು: ದಕ್ಷಿಣ ಭಾರತದ ಖ್ಯಾತ ನಟಿ ಪೂಜಾ ಹೆಗ್ಡೆ ಅವರು ಇಂಡಿಗೊವಿಮಾನದಲ್ಲಿ ತಮಗೆ ಕೆಟ್ಟ ಅನುಭವವಾಗಿದೆ ಎಂದು ಟ್ವೀಟ್‌ ಮಾಡಿ ಅಸಮಾಧಾನ ಹೊರ ಹಾಕಿದ್ದಾರೆ. ಇದಕ್ಕೆ ಇಂಡಿಗೊಸಂಸ್ಥೆ ನಟಿಯಲ್ಲಿ ಕ್ಷಮೆ ಕೋರಿದೆ.

ಬಾಲಿವುಡ್‌ ಸೇರಿದಂತೆತೆಲುಗು, ತಮಿಳು ಸಿನಿಮಾಗಳಲ್ಲಿ ಪೂಜಾ ಸಾಕಷ್ಟು ಬ್ಯುಸಿಯಾಗಿದ್ದಾರೆ. ಇತ್ತೀಚೆಗೆ ಮುಂಬೈನಿಂದ ಪ್ರಯಾಣ ಮಾಡುವಾಗ ಇಂಡಿಗೊವಿಮಾನ ಸಂಸ್ಥೆಯ ಸಿಬ್ಬಂದಿಯಿಂದ ತಮಗೆ ಕೆಟ್ಟ ಅನುಭವವಾಗಿದೆಎಂದು ಟ್ವೀಟ್‌ ಮಾಡಿದ್ದಾರೆ.

ನಿಮ್ಮ ಸಂಸ್ಥೆ ಸಿಬ್ಬಂದಿ ತುಂಬಾ ಒರಟುತನದಿಂದ ವರ್ತನೆ ಮಾಡಿರುವುದು ನನಗೆ ಬೇಸರ ತರಿಸಿದೆ. ವಿಫುಲ್‌ ನಕಾಶೆ ಎಂಬ ಸಿಬ್ಬಂದಿ ನಮ್ಮೊಂದಿಗೆ ದುರಹಂಕಾರದಿಂದ ನಡೆದುಕೊಂಡಿದ್ದಾರೆ. ಯಾವುದೇ ಕಾರಣವಿಲ್ಲದೇ ಈ ರೀತಿ ವರ್ತನೆ ಮಾಡಿದ್ದಾರೆ. ಅವರು ಮಾತನಾಡುವುದು ಬೆದರಿಕೆಯಂತಿತ್ತು. ಸಾಮಾನ್ಯವಾಗಿ ಇಂತಹ ವಿಷಯಗಳನ್ನು ನಾನು ಟ್ವೀಟ್‌ ಮಾಡುವುದಿಲ್ಲ, ಅವರ ವರ್ತನೆಯಿಂದ ಬೇಸರಗೊಂಡು ಟ್ವೀಟ್‌ ಮಾಡಿರುವೆ ಎಂದು ಪೂಜಾ ಹೇಳಿದ್ದಾರೆ.

ADVERTISEMENT

ಈ ಘಟನೆ ಬಗ್ಗೆ ಇಂಡಿಗೊಸಂಸ್ಥೆ ‍ಪೂಜಾ ಅವರಲ್ಲಿ ಕ್ಷಮೆ ಕೋರಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಸಂಸ್ಥೆ, ದಯಮಾಡಿ ಕ್ಷಮೆ ಇರಲಿ, ನಾವು ನಿಮ್ಮನ್ನು ಶೀಘ್ರದಲ್ಲಿ ಸಂಪರ್ಕ ಮಾಡುತ್ತೇವೆ. ನಿಮ್ಮ ಪಿಎನ್‌ಆರ್‌ ಸಂಖ್ಯೆ ಹಾಗೂ ಮೊಬೈಲ್‌ ನಂಬರ್‌ ಕಳುಹಿಸಿಕೊಡಿ ಎಂದು ಸಂಸ್ಥೆ ಟ್ವೀಟ್‌ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.