ADVERTISEMENT

ಹೊಸ ಫೋಟೊಗಳನ್ನು ಹರಿಬಿಟ್ಟ ಪೂಜಾ ಹೆಗ್ಡೆ: ಬೋಲ್ಡ್‌ ಲುಕ್‌ನಲ್ಲಿ ನಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 7 ಅಕ್ಟೋಬರ್ 2021, 5:34 IST
Last Updated 7 ಅಕ್ಟೋಬರ್ 2021, 5:34 IST
ಪೂಜಾ ಹೆಗ್ಡೆ
ಪೂಜಾ ಹೆಗ್ಡೆ   

ಬೆಂಗಳೂರು: ನಟಿ ಪೂಜಾ ಹೆಗ್ಡೆ ‘ಅಲಾ ವೈಕುಂಠಪುರಂ'ತೆಲುಗು ಸಿನಿಮಾ ನಂತರ ಸಾಕಷ್ಟು ಬುಜಿಯಾಗಿದ್ದಾರೆ. ಅವರು ಈಗ ತಮಿಳಿನಲ್ಲಿ ವಿಜಯ್ ನಟನೆಯ ‘ಬೀಸ್ಟ್'ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಅನೇಕ ದಿನಗಳಿಂದ ತಮ್ಮ ಫೋಟೊಶೂಟ್ ನಡೆಸಿರದಿದ್ದ ಪೂಜಾ, ಇದೀಗ ಹೊಸ ಫೋಟೊಗಳನ್ನು ಹರಿಬಿಟ್ಟಿದ್ದು ಅವು ಇಂಟರ್‌ನೆಟ್‌ನಲ್ಲಿ ಸದ್ದು ಮಾಡಿವೆ. ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಹೊಸ ಪೋಟೊಶೂಟ್‌ನ ಫೋಟೊಗಳನ್ನು ಹಂಚಿಕೊಂಡಿರುವ ಪೂಜಾ, ಪಡ್ಡೆ ಹುಡುಗರ ಬಿಸಿ ಏರಿಸಿದ್ದಾರೆ.

ಬಿಳಿ ಟಾಪ್‌ನಲ್ಲಿ ಗುಲಾಬಿ ಹಿಡಿದು ಫೋಸ್ ಕೊಟ್ಟಿರುವ ನಟಿ ಆಕರ್ಷಕ ಮೂರು ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ADVERTISEMENT

ಪೂಜಾ ಹೆಗ್ಡೆ ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ರೋಮ್ಯಾಂಟಿಕ್ ಚಿತ್ರವಾಗಿರುವ ‘ರಾಧೆ ಶ್ಯಾಮ್'2022 ರ ಜನವರಿ 14 ಕ್ಕೆ ಬಿಡುಗಡೆಯಾಗಲು ಸಿದ್ದವಾಗಿದೆ. ಉಳಿದಂತೆ ತೆಲುಗಿನ ‘ಮೋಸ್ಟ್ ಎಲಿಜಿಬಲ್ ಬ್ಯಾಚಲರ್', ‘ಆಚಾರ್ಯ್', ‘ಸರ್ಕಸ್'ಹಾಗೂ ‘ಬೀಸ್ಟ್‌'ಸಿನಿಮಾಗಳಲ್ಲಿ ಸದ್ಯಕ್ಕೆ ಪೂಜಾ ತೊಡಗಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.