ADVERTISEMENT

ಒಳ ಉಡುಪು ಧರಿಸದೆ ಬೀದಿಗೆ ಬಂದ ಪೂನಂ ಪಾಂಡೆ: ಸೆಲ್ಫಿಗೆ ಮುಗಿಬಿದ್ದ ಹುಡುಗರು!

​ಪ್ರಜಾವಾಣಿ ವಾರ್ತೆ
Published 26 ಜೂನ್ 2022, 7:09 IST
Last Updated 26 ಜೂನ್ 2022, 7:09 IST
ಪೂನಂ ಪಾಂಡೆ
ಪೂನಂ ಪಾಂಡೆ   

ಮುಂಬೈ: ಬೋಲ್ಡ್‌ ಫೋಟೊಗಳು ಮತ್ತು ವಿಡಿಯೊಗಳ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿರುವ ನಟಿ, ರೂಪದರ್ಶಿ ಪೂನಂ ಪಾಂಡೆ ಇದೀಗ ಮತ್ತೊಮ್ಮೆ ನೆಟ್ಟಿಗರ ಟ್ರೋಲ್‌ಗೆ ಒಳಗಾಗಿದ್ದಾರೆ.

ಸಿನಿಮಾ, ಮಾಡೆಲಿಂಗ್‌ನಲ್ಲಿ ಅಷ್ಟೊಂದು ಸುದ್ದಿ ಮಾಡದ ಈ ನಟಿ, ವಿವಾದಗಳಿಂದಾಗಿಯೇ ಸಾಕಷ್ಟು ಸುದ್ದಿಯಾಗುತ್ತಿದ್ದಾರೆ. ಇದೀಗ ಒಳ ಉಡುಪು ಹಾಕದೇ ರಸ್ತೆಗೆ ಬಂದು ನೆಟ್ಟಿಗರಿಂದಟ್ರೋಲ್‌ಗೆ ಒಳಗಾಗಿದ್ದಾರೆ.

ಇತ್ತೀಚೆಗೆ ಪೂನಂ ಪಾಂಡೆ ಮುಂಬೈನಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಬಿಳಿ ಬಣ್ಣದ ಕ್ರಾಪ್‌ಟಾಪ್‌ ಧರಿಸಿದ್ದ ಪೂನಂ ಪಾಂಡೆ ಒಳ ಉಡುಪು ಹಾಕಿರಲಿಲ್ಲ. ಇದೇ ವೇಳೆ ಅಭಿಮಾನಿಗಳು ಪೂನಂ ಜತೆ ಸೆಲ್ಫಿ ತೆಗೆಸಿಕೊಳ್ಳಲು ಮುಗಿ ಬಿದ್ದಿದ್ದಾರೆ. ಈ ವಿಡಿಯೊವನ್ನು ಹಲವರು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ADVERTISEMENT

ಪೂನಂ ವಿಡಿಯೊ ಗಮನಿಸಿದ್ದ ಅಭಿಮಾನಿಗಳು ನಾನಾ ರೀತಿಯಲ್ಲಿ ಕಾಮೆಂಟ್‌ಗಳನ್ನು ಮಾಡಿದ್ದಾರೆ. ನಾವು ನಿಮ್ಮ ಅಭಿಮಾನಿಗಳು ಹೌದು, ನೀವು ಸಮಾಜದಲ್ಲಿ ಸ್ವಲ್ಪವಾದರೂ ಗೌರವ ಉಳಿಸಿಕೊಳ್ಳಿ ಎಂದು ಕೆಲವರು ಹೇಳಿದ್ದಾರೆ. ಒಳ್ಳೆಯ ಬಟ್ಟೆ ಹಾಕಿಕೊಂಡು ಗೌರವದಿಂದ ಬದುಕಿ ಎಂದು ನೆಟ್ಟಿಗರು ಹೇಳಿದ್ದಾರೆ.

ಸಾಕಷ್ಟು ನೆಟ್ಟಿಗರು ಪೂನಂ ನಡೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರ ಈ ವಿಡಿಯೊವನ್ನು ಇನ್‌ಸ್ಟಾಗ್ರಾಂನಲ್ಲಿ ಟ್ರೋಲ್‌ ಮಾಡಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.