ADVERTISEMENT

ಪಂಜಾಬಿ ಗಾಯಕ ಬಲ್ವಿಂದರ್‌ ಸಫ್ರಿ ನಿಧನ

ಪಿಟಿಐ
Published 27 ಜುಲೈ 2022, 14:21 IST
Last Updated 27 ಜುಲೈ 2022, 14:21 IST
ಬಲ್ವಿಂದರ್‌ ಸಫ್ರಿ
ಬಲ್ವಿಂದರ್‌ ಸಫ್ರಿ   

ಲಂಡನ್‌ : ಭಾರತೀಯ ಮೂಲದ ಬ್ರಿಟನ್‌ನ ಪ್ರಸಿದ್ಧ ಪಂಜಾಬಿ ಗಾಯಕ ಬಲ್ವಿಂದರ್‌ ಸಫ್ರಿ (63) ನಿಧನರಾಗಿದ್ದಾರೆ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಬರ್ಮಿಂಗ್‌ಹ್ಯಾಮ್‌ನಲ್ಲಿ ನೆಲೆಸಿದ್ದ ಅವರು ಪಂಜಾಬಿನಲ್ಲಿ ಜನಿಸಿದ್ದರು. 1989ರಿಂದ ಯುಕೆ ಭಾಂಗ್ರಾದ ಭಾಗವಾಗಿದ್ದ ಅವರು 1990ರಲ್ಲಿ ಸಫ್ರಿ ಬಾಯ್ಸ್ ಬ್ಯಾಂಡ್‌ ರಚಿಸಿದ್ದರು.

‘ಬ್ರೈನ್‌ ಡ್ಯಾಮೇಜ್‌’, ಹೃದಯ ಶಸ್ತ್ರಚಿಕಿತ್ಸೆ ಬಳಿಕ ಸಫ್ರಿ ಕೋಮಾಗೆ ಹೋಗಿದ್ದರು. ಬಳಿಕ ಗುಣಮುಖರಾಗಿಜುಲೈ 15ರಂದು ಆಸ್ಪತ್ರೆಯಿಂದ ಮನೆಗೆ ತೆರಳಿದ್ದರು. ನಂತರ ಅವರನ್ನು ವಿಶೇಷ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಸಫ್ರಿ ಅವರ ನಿಧನಕ್ಕೆ ಭಾರತ ಮತ್ತು ಬ್ರಿಟನ್‌ ಸಂಗೀತ ಕ್ಷೇತ್ರದ ಅನೇಕ ದಿಗ್ಗಜರು ಕಂಬನಿ ಮಿಡಿದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.