ADVERTISEMENT

ಹೊಸ ವರ್ಷಕ್ಕೆ ಪ್ರಭಾಸ್ ಅಭಿಮಾನಿಗಳಿಗೆ ಶುಭಸುದ್ದಿ; ‘ಸ್ಪಿರಿಟ್’ ಪೋಸ್ಟರ್ ರಿಲೀಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಜನವರಿ 2026, 5:59 IST
Last Updated 1 ಜನವರಿ 2026, 5:59 IST
<div class="paragraphs"><p>ನಟ&nbsp;ಪ್ರಭಾಸ್</p></div>

ನಟ ಪ್ರಭಾಸ್

   

ಚಿತ್ರ: ಇನ್‌ಸ್ಟಾಗ್ರಾಂ

ಹೊಸ ವರ್ಷದ ಮೊದಲ ದಿನವೇ ಡಾರ್ಲಿಂಗ್‌ ಪ್ರಭಾಸ್ ಅವರು ಅಭಿಮಾನಿಗಳಿಗೆ ಶುಭಸುದ್ದಿ ಕೊಟ್ಟಿದ್ದಾರೆ. ಪ್ರಭಾಸ್ ಅಭಿನಯದ ‘ಸ್ಪಿರಿಟ್’ ಸಿನಿಮಾ ಮೊದಲ ಪೋಸ್ಟರ್‌ ಬಿಡುಗಡೆಯಾಗಿದೆ. ನಟ ಪ್ರಭಾಸ್ ಅವರು ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಸಿನಿಮಾದ ಮೊದಲ ಪೋಸ್ಟರ್‌ ಅನ್ನು ಹಂಚಿಕೊಂಡಿದ್ದಾರೆ.

ADVERTISEMENT

ಸ್ಪಿರಿಟ್ ಸಿನಿಮಾದ ಪೋಸ್ಟರ್‌ನಲ್ಲಿ ನಟ ಪ್ರಭಾಸ್‌ಗೆ ಮೈತುಂಬಾ ಗಾಯಗಳಾಗಿದ್ದು, ಪ್ರಭಾಸ್‌ ಅವರಿಗೆ ನಾಯಕ ನಟಿ ಸಿಗರೇಟ್ ಹಚ್ಚಿಸುತ್ತಿದ್ದಾರೆ. ಈ ಚಿತ್ರ ನೋಡಿದ ಅಭಿಮಾನಿಗಳು ಅನಿಮಲ್‌ ಸಿನಿಮಾ ನೆನಪಾಗುತ್ತಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಅನಿಮಲ್ ಸಿನಿಮಾದಲ್ಲಿ ರಣಬೀರ್ ಕಪೂರ್ ಕಾಣಿಸಿಕೊಂಡ ರೀತಿಯಲ್ಲೇ ಪ್ರಭಾಸ್ ಅವರ ಲುಕ್ ಕಾಣುತ್ತಿದೆ. ಸ್ಪಿರಿಟ್ ಪೋಸ್ಟರ್‌ನಲ್ಲಿ ಕಿಟಕಿಯ ಪಕ್ಕದಲ್ಲಿ ನಿಂತುಕೊಂಡಿರುವ ಪ್ರಭಾಸ್‌ಗೆ ಬೆನ್ನಿನ ಮೇಲೆ ಅಲ್ಲಲ್ಲಿ ಗಾಯಗಳಾಗಿವೆ. ಒಂದು ಕೈಯಲ್ಲಿ ಮದ್ಯದ ಬಾಟಲಿಯನ್ನು ಹಿಡಿದುಕೊಂಡಿದ್ದಾರೆ. ಪ್ರಭಾಸ್ ಮುಂದೆ ನಟಿ ತೃಪ್ತಿ ಡಿಮ್ರಿ ಸಿಗರೇಟ್‌ಗೆ ಬೆಂಕಿ ಹಚ್ಚುತ್ತಿದ್ದಾರೆ.

ಇದೇ ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಸ್ಪಿರಿಟ್ ಸಿನಿಮಾದ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಾಗಿದೆ. ಅರ್ಜುನ್ ರೆಡ್ಡಿ ಹಾಗೂ ಕಬೀರ್ ಸಿಂಗ್ ಖ್ಯಾತಿಯ ನಿರ್ದೇಶಕ ಸಂದೀಪ್ ರೆಡ್ಡಿ ವಾಂಗಾ ಅವರು ಆ್ಯಕ್ಷನ್ ಕಟ್ ಹೇಳುತ್ತಿರುವ ‘ಸ್ಪಿರಿಟ್‌’ ಸಿನಿಮಾ ಇದೇ ಸಂಕ್ರಾಂತಿಗೆ ತೆರೆಗೆ ಬರಲು ಸಜ್ಜಾಗಿದೆ. ಈ ಬಗ್ಗೆ ತಂಡದಿಂದ ಅಧಿಕೃತ ಮಾಹಿತಿ ಹೊರ ಬಿಳಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.