ನಟ ಪ್ರಥಮ್
ಚಿತ್ರ: ನಟ ಪ್ರಥಮ್, ಫೇಸ್‌ಬುಕ್
ಕಲಿಕೆ ಎಂಬುವುದು ವ್ಯಕ್ತಿಯ ಜೀವನದಲ್ಲಿ ಮಹತ್ವವಾದದ್ದು. ಕಲಿಕೆಯಿಂದ ನಾವು ಏನು ಬೇಕಾದರೂ ಸಾಧಿಸಬಹುದು. ದೇಶ–ವಿದೇಶ ಸುತ್ತಾಡಬಹುದು. ಪ್ರತಿದಿನ ಓದುತ್ತಾ ಹೋದರೆ ನಮ್ಮ ಜ್ಞಾನ ಸಮೃದ್ಧಿಯಾಗುತ್ತದೆ. ಹಣಕ್ಕಿಂತಲೂ ಜ್ಞಾನ ದೊಡ್ಡ ಸಂಪತ್ತು. ಯಾವ ಮನುಷ್ಯ ಜ್ಞಾನವನ್ನು ಹೊಂದಿರುತ್ತಾನೋ ಆಗ ಮಾತ್ರ ಅವನು ಪರಿಪೂರ್ಣ ವ್ಯಕ್ತಿಯಾಗಲು ಸಾಧ್ಯ.
ಆದರೆ, ಇತ್ತೀಚಿನ ದಿನಗಳಲ್ಲಿ ಎಲ್ಲಿ ನೋಡಿದರೂ, ಯಾರ ಕೈಯಲ್ಲೂ ಮೊಬೈಲ್‌ಗಳು ಕಾಣಸಿಗುತ್ತವೆ. ಬಸ್, ರೈಲು, ಮೆಟ್ರೊ ಹೀಗೆ ನಿಂತಲ್ಲಿ, ಕೂತಲ್ಲಿ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಅವರವರ ಕೈಯಲ್ಲಿ ಮೊಬೈಲ್‌ಗಳದ್ದೇ ಕಾರುಬಾರು. ಈ ವಿಚಾರ ಪ್ರಸ್ತಾಪಿಸುವುದಕ್ಕೆ ಮುಖ್ಯ ಕಾರಣ ನಟ ಪ್ರಥಮ್ ಅವರು ಹಂಚಿಕೊಂಡ ಪೋಸ್ಟ್.
ನಟ ಒಳ್ಳೆ ಹುಡುಗ ಪ್ರಥಮ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. ಫೋಟೊವನ್ನು ಹಂಚಿಕೊಳ್ಳುವುದರ ಜೊತೆಗೆ ಈಗಿನ ಕಾಲದ ಮಕ್ಕಳಿಗೆ ಓದೋ ಅಭ್ಯಾಸವೇ ತಪ್ಪಿ ಹೋಗ್ತಿದೆ ಎಂದು ಒತ್ತಿ ಹೇಳಿದ್ದಾರೆ.
ನಟ ಪ್ರಥಮ್ ಹಂಚಿಕೊಂಡ ಪೋಸ್ಟ್‌ನಲ್ಲಿ ಏನಿದೆ?
‘ಸಾಧ್ಯವಾದಷ್ಟು ಶೇರ್ ಮಾಡಿ! ತುಂಬಾ ಮುಖ್ಯವಾದ ಮಾಹಿತಿ. ಇತ್ತೀಚೆಗೆ ನಾನು ಅಮೇರಿಕಾಗೆ ಹೋಗಿದ್ದೆ, ಅಲ್ಲಿ ‘immigration’ (ವಲಸೆ) ನಡೆಯುವಾಗ ನಡೆದ ಘಟನೆ ಇದು. ಯಾರೊಬ್ಬರೂ ಹೆಚ್ಚು ಫೋನ್ ನೋಡ್ತಾ ಇರಲಿಲ್ಲ. ಸಮಯ ಸಿಕ್ಕ ಕೂಡಲೇ ತಮ್ಮ ಬ್ಯಾಗ್‌ನಿಂದ ಪುಸ್ತಕ ತಗೆದು ಓದುತ್ತಿದ್ದರು. ಅಷ್ಟು ಮುಂದುವರೆದ ದೇಶದಲ್ಲಿ ಈಗಲೂ ಓದೋ ಅಭ್ಯಾಸವಿದೆ. ಸಮಯ ಹಾಳು ಮಾಡಲ್ಲ. ನಾವು ನಮ್ಮ ಮಕ್ಕಳಿಗೆ ಪುಸ್ತಕ ಕೊಡೋ ಬದಲು ಫೋನ್ ಕೊಡ್ತೀವಿ. ಮಕ್ಕಳಿಗೆ ಓದೋ ಅಭ್ಯಾಸವೇ ತಪ್ಪಿ ಹೋಗ್ತಿದೆ.
ಯೋಚಿಸಿ.. 20 ನಿಮಿಷ ‘immigration’ (ವಲಸೆ) ನಡೆಯುತ್ತೆ ಪಾಸ್‌ಪೋರ್ಟ್ ಮುದ್ರಿಸುವ (passport stamping) ಆ ಸಮಯವನ್ನೂ ಅವ್ರು ಮಿಸ್ ಮಾಡಲ್ಲ. ದಯವಿಟ್ಟು ಶೇರ್ ಮಾಡಿ. ನಮ್ಮವರು ಮಕ್ಕಳ ಕೈಗೆ ಪುಸ್ತಕ ಕೊಡಲಿ. ಮೊಬೈಲ್ ನೋಡೋ ಪರಂಪರೆ ಕಮ್ಮಿ ಆಗಿ, ಓದೋ ಪರಂಪರೆ ಉಳಿಯಲಿ. ಇಷ್ಟವಾದ್ರೆ ನಾಲ್ಕು ಜನರಿಗೆ ಹಂಚಿ. ಬಹಳ ಮುಖ್ಯವಾದದ್ದು’ ಎಂದು ಬರೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.