ADVERTISEMENT

Sandalwood: ಸಿನಿಮಾ ನಿರ್ಮಾಣಕ್ಕಿಳಿದ ಪ್ರಿಯಾ ಸುದೀಪ್‌

​ಪ್ರಜಾವಾಣಿ ವಾರ್ತೆ
Published 8 ಜನವರಿ 2026, 0:30 IST
Last Updated 8 ಜನವರಿ 2026, 0:30 IST
   

ನಟ ಸುದೀಪ್‌ ಅವರ ಪತ್ನಿ ಪ್ರಿಯಾ ತಮ್ಮ ಜನ್ಮದಿನದಂದು ‘ಸುಪ್ರಿಯಾನ್ವಿ ಪಿಕ್ಚರ್‌ ಸ್ಟುಡಿಯೊ’ ಅನಾವರಣಗೊಳಿಸಿದ್ದಾರೆ. ಈ ಮೂಲಕ ಯುವ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ಭರವಸೆ ನೀಡಿದ್ದಾರೆ.

ಸುದೀಪ್‌ ನಟನೆಯ ‘ಮಾರ್ಕ್‌’ ಸಿನಿಮಾ ಮೂಲಕ ಈಗಾಗಲೇ ವಿತರಣೆ ಕ್ಷೇತ್ರಕ್ಕೆ ಕಾಲಿಟ್ಟಿದ್ದರು ಪ್ರಿಯಾ. ಮುಂದೆಯೂ ಅವರು ಸಿನಿಮಾ ವಿತರಣೆಯಲ್ಲಿ ಮುಂದುವರಿಯುವ ಮುನ್ಸೂಚನೆಯನ್ನು ಸುದೀಪ್‌ ನೀಡಿದ್ದರು. ಸುದೀಪ್‌ ಅಕ್ಕನ ಮಗ ಸಂಚಿತ್‌ ಅವರ ‘ಮ್ಯಾಂಗೋ ಪಚ್ಚ’ ಸಿನಿಮಾವನ್ನು ಕೆಆರ್‌ಜಿ ಸಂಸ್ಥೆ ಜೊತೆಗೂಡಿ ಪ್ರಿಯಾ ನಿರ್ಮಾಣ ಮಾಡಿದ್ದಾರೆ. ಇದೀಗ ಸುಪ್ರಿಯಾನ್ವಿ ಪಿಕ್ಚರ್‌ ಸ್ಟುಡಿಯೊ ಮೂಲಕ ಸ್ವತಂತ್ರವಾಗಿ ಪ್ರತಿಭಾನ್ವಿತರಿಗೆ ಜೊತೆಯಾಗಲಿದ್ದಾರೆ. ಇತ್ತೀಚೆಗೆ ಸುಪ್ರಿಯಾನ್ವಿ‌ ನಿರ್ಮಾಣ‌ ಸಂಸ್ಥೆಯ ಮೋಷನ್ ಪೋಸ್ಟರ್ ಬಿಡುಗಡೆಯಾಗಿದ್ದು, ‘ಅರ್ಥಭರಿತವಾದ ಕಥೆಗಳೊಂದಿಗೆ ಬರಲಿದ್ದೇವೆ’ ಎಂದು ಪ್ರಿಯಾ ತಿಳಿಸಿದ್ದಾರೆ.

‘ಸುಪ್ರಿಯಾನ್ವಿ ಸಂಸ್ಥೆಯಡಿ ಹೊಸ ಹೊಸ ಕಥೆಗಳಿಗೆ, ಪ್ರತಿಭಾನ್ವಿತ ಕಲಾವಿದರಿಗೆ ಅವಕಾಶ ಕಲ್ಪಿಸಲಾಗುವುದು, ವಿಭಿನ್ನ ಬಗೆಯ ಕಾಂಟೆಂಟ್‌ ಆಧಾರಿತ ಸಿನಿಮಾಗಳು ನಮ್ಮ ಆದ್ಯತೆ’ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಅವರು ಬರೆದುಕೊಂಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.