ADVERTISEMENT

ವಿಚ್ಛೇದನಕ್ಕೆ ಮುಂದಾದರೇ ಪ್ರಿಯಾಂಕಾ ಚೋಪ್ರಾ–ನಿಕ್ ಜೋನಸ್‌?

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2019, 14:19 IST
Last Updated 30 ಮಾರ್ಚ್ 2019, 14:19 IST
ನಿಕ್‌ ಜೋನಸ್‌–ಪ್ರಿಯಾಂಕಾ ಚೋಪ್ರಾ ನಿಶ್ಚಿತಾರ್ಥದ ಸಂದರ್ಭದ ಚಿತ್ರ
ನಿಕ್‌ ಜೋನಸ್‌–ಪ್ರಿಯಾಂಕಾ ಚೋಪ್ರಾ ನಿಶ್ಚಿತಾರ್ಥದ ಸಂದರ್ಭದ ಚಿತ್ರ   

ಬೆಂಗಳೂರು:ನಟಿ ಪ್ರಿಯಾಂಕಾ ಚೋಪ್ರಾ ಮತ್ತು ಹಾಲಿವುಡ್‌ ಗಾಯಕ ನಿಕ್‌ ಜೋನಸ್‌ ದಾಂಪತ್ಯದಲ್ಲಿ ಬಿರುಕು ಉಂಟಾಗಿದ್ದು ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ಕಳೆದ ಡಿಸೆಂಬರ್‌ನಲ್ಲಿ ವಿವಾಹವಾಗಿದ್ದ ಈ ಜೋಡಿ ಒಬ್ಬರನ್ನೊಬ್ಬರು ನಿಜವಾಗಿ ಅರ್ಥ ಮಾಡಿಕೊಳ್ಳಬೇಕಾದ ಸಮಯದಲ್ಲಿ ವಿಚ್ಛೇದನಕ್ಕೆ ಮುಂದಾಗಿದ್ದಾರೆ ಎಂದು ‘ಒಕೆ’ ಎಂಬ ಹೆಸರಿನ ನಿಯತಕಾಲಿಕೆ ವರದಿ ಮಾಡಿರುವುದಾಗಿ ಗಾಸಿಪ್‌ಕಾಪ್ವೆಬ್‌ಸೈಟ್ ಉಲ್ಲೇಖಿಸಿದೆ.

ಮೂಲಗಳ ಪ್ರಕಾರ, ನಿಕ್ ಅವರ ಕುಟುಂಬದವರಿಗೆ ಪ್ರಿಯಾಂಕಾ ಕುರಿತು ಹಿಂದೆ ಇದ್ದ ಉತ್ತಮ ಅಭಿಪ್ರಾಯ ಈಗ ಇಲ್ಲ. ಹೀಗಾಗಿ ಅವರೂ ವಿಚ್ಚೇದನಕ್ಕೆ ಒತ್ತಾಯ ಮಾಡುತ್ತಿದ್ದಾರೆ ಎನ್ನಲಾಗಿದೆ.

ನಿಕ್–ಪ್ರಿಯಾಂಕಾ ಸಂಬಂಧ ಕಡಿದುಕೊಂಡರೆ ಹಣಕಾಸು ವಿಚಾರದಲ್ಲಿಯೂ ಜಗಳವೇರ್ಪಡುವ ಸಾಧ್ಯತೆ ಇದೆ ಎಂದೂ ವರದಿ ಉಲ್ಲೇಖಿಸಿದೆ.

‘ಒಕೆ’ನಿಯತಕಾಲಿಕೆ ಮುಖಪುಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.