ಪ್ರಿಯಾಂಕಾ ಚೋಪ್ರಾ
ಮೆಟ್ ಗಾಲಾ ಫ್ಯಾಷನ್ ಫಿಯೆಸ್ತಾದಲ್ಲಿ ಸದಾ ಗಮನ ಸೆಳೆಯುವ ಜೋಡಿಯಲ್ಲಿ ನಿಕ್ ಜೋನಸ್, ಪ್ರಿಯಾಂಕಾ ಚೋಪ್ರಾ ಜೋನಸ್ ಅವರದ್ದು. 2019ರಲ್ಲಿ ವಿಶೇಷ ವೇಷಭೂಷಣದಲ್ಲಿ ಕಂಗೊಳಿಸಿದ್ದ ಪ್ರಿಯಾಂಕಾ ಚೋಪ್ರಾ, ಈ ಸಲ ಅದಕ್ಕೆ ತದ್ವಿರುದ್ಧವಾಗಿ ಪೋಲ್ಕಾ ಡಾಟ್ ಪೋಷಾಕಿನಲ್ಲಿ ಮಿಂಚಿದ್ದಾರೆ.
ಹಾಲ್ಕೆನೆ ಬಣ್ಣದ ಪೋಷಾಕಿಗೆ ಹೊಂದುವಂಥ ಕೋಟನ್ನೇ ನಿಕ್ ಸಹ ತೊಟ್ಟಿದ್ದಾರೆ. ಹಾಲಿವುಡ್ ನಟ ನಿಕ್‌ಗೆ ಭಾರತೀಯ ಜೀಜಾ (ಭಾರತೀಯ ಭಾವ) ಎಂಬುದು ಕಪಿಲ್‌ಶರ್ಮಾ ಕೊಟ್ಟಿರುವ ಬಿರುದಾಗಿದೆ. ಪ್ರಿಯಾಂಕಾರನ್ನು ಪಿಗ್ಗಿ ಎಂದು ಪ್ರೀತಿಯಿಂದ ಕರೆಯಲಾಗುತ್ತದೆ. 2019ರ ಲುಕ್ ಅನ್ನು ನೆನಪಿಸಿಕೊಂಡರೆ ಓಹ್... ಪ್ರಿಯಾಂಕಾ ಎಂದು ಶಾರುಖ್ ಖಾನ್ ಉದ್ಗರಿಸಿದ್ದರು. ಢಾಳಾದ ಮೇಕಪ್, ಕಣ್ಣಸುತ್ತ ರಜತ ವರ್ಣದ ದಿರಿಸಿನಲ್ಲಿ ಗಮನ ಸೆಳೆದಿದ್ದರು.
ಈ ಸಲ ಪತಿ ನಿಕ್ ಜೊತೆಗೆ, ಇಬ್ಬರೂ ಪರಸ್ಪರ ಹೊಂದುವ ವರ್ಣಸಂಯೋಜನೆಯ ಉಡುಗೆ ತೊಟ್ಟು ಗಮನ ಸೆಳೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.