ADVERTISEMENT

ಪರಮಾತ್ಮನ ‘ಪರಂ’ನನ್ನು ಭಟ್ರು ನೆನಪಿಸಿಕೊಂಡಿದ್ದು ಹೀಗೆ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2021, 6:33 IST
Last Updated 30 ಅಕ್ಟೋಬರ್ 2021, 6:33 IST
ಯೋಗರಾಜ್‌ ಭಟ್‌ ಪತ್ರ
ಯೋಗರಾಜ್‌ ಭಟ್‌ ಪತ್ರ   

ದಶಕದ ಹಿಂದೆ ತೆರೆಕಂಡಿದ್ದ ಯೋಗರಾಜ್‌ ಭಟ್‌ ನಿರ್ದೇಶನದ ‘ಪರಮಾತ್ಮ’ ಚಿತ್ರ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಹೊಸ ಅಭಿಮಾನಿ ಬಳಗವನ್ನೇ ಸೃಷ್ಟಿಸಿತ್ತು.

ಚಿತ್ರದಲ್ಲಿನ ‘ಪರಂ’ ಪಾತ್ರ ಪುನೀತ್‌ ಅವರಿಗೆ ಹೊಸ ಇಮೇಜ್‌ ತಂದುಕೊಟ್ಟಿತ್ತು. ಚಿತ್ರದಲ್ಲಿ ‘ಪರಂ’ನ ತಂದೆಯ ಪಾತ್ರದಲ್ಲಿ ಅನಂತನಾಗ್‌ ನಟಿಸಿದ್ದರು. ಚಿತ್ರದ ದೃಶ್ಯವೊಂದರಲ್ಲಿ ಅನಂತನಾಗ್‌ ಅವರು ಪುನೀತ್‌ ಹೃದಯ ತಪಾಸಣೆ ಮಾಡುವ ಸಂದರ್ಭದಲ್ಲಿ ಪುನೀತ್‌ ಹೀಗನ್ನುತ್ತಾರೆ; ‘ನಾನ್ಯಾವಾಗ ಉಸಿರಾಡೋದು ನಿಲ್ಸಿದ್ದೀನಿ. ತೆಗೊಳಿ, ಪಾಠ 118. ಹೃದಯ ನಮ್ಮ ಮುಷ್ಠಿಯಷ್ಟಿದೆ. ಮೂರ್ನಾಲ್ಕು ಕವಾಟಗಳು. ಏನ್‌ ಪಪ್ಪ ನಮ್‌ ಇಂಜಿನ್‌ ಕಥೆ. ಪಿಸ್ಟನ್‌, ಪ್ಲಗ್‌ ಎಲ್ಲ ಸರೀಗಿದ್ಯಾ? ಬೋರಿಂಗ್‌ ಬಂದಿದ್ಯಾ? ಮೈಲೇಜ್‌ ಎಷ್ಟು ಕೊಡುತ್ತಿದೆ? ಹಾರ್ಟ್‌ನಲ್ಲಿ ಹಿಮಾಲಯಾನೇ ಇಟ್ಕೊಂಡು ಬಂದ ಮಕ್ಕಳು ನಾವು.’

ಇದೇ ಚಿತ್ರದ ಕೊನೆಯಲ್ಲಿ ಬರುವ ಸಾಲೊಂದನ್ನು ಉಲ್ಲೇಖಿಸಿ, ಪುನೀತ್‌ ಅವರನ್ನು ನೆನಪಿಸಿಕೊಳ್ಳುತ್ತಾ ಯೋಗರಾಜ್‌ ಭಟ್‌ ಅವರು ಪತ್ರವೊಂದನ್ನು ಅವರಿಗೆ ಬರೆದಿದ್ದಾರೆ. ‘ಜೊತೆಗಿರದ ಜೀವ ಎಂದೆಂದಿಗೂ ಜೀವಂತ’ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.