ADVERTISEMENT

ಬೇರೆ ಭಾಷೆಗಳಲ್ಲೂ ‘ಯುವರತ್ನʼ?

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2020, 9:46 IST
Last Updated 27 ಅಕ್ಟೋಬರ್ 2020, 9:46 IST
ಯುವರತ್ನ ಚಿತ್ರದ ಪೋಸ್ಟರ್‌ (ಟ್ವಿಟರ್‌ ಚಿತ್ರ)
ಯುವರತ್ನ ಚಿತ್ರದ ಪೋಸ್ಟರ್‌ (ಟ್ವಿಟರ್‌ ಚಿತ್ರ)   

ಪುನೀತ್‌ ರಾಜ್‌ ಕುಮಾರ್‌ ಅಭಿನಯದ ಯುವರತ್ನ ಬಿಡುಗಡೆಗೆ ಸಿದ್ಧವಾಗಿದೆ. ಅದು ಇತರ ಭಾಷೆಗಳಿಗೂ ಡಬ್‌ ಆಗುತ್ತಿದೆಯೇ ಎಂಬ ಪ್ರಶ್ನೆ ಪುನೀತ್‌ ಅಭಿಮಾನಿಗಳದ್ದು.

ಅದಕ್ಕೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ನಿರ್ದೇಶಕ ಸಂತೋಷ್‌ ಆನಂದರಾಮ್‌, ‘ಎಲ್ಲರೂ ಈ ಪ್ರಶ್ನೆ ಕೇಳುತ್ತಿದ್ದಾರೆ. ಶೀಘ್ರವೇ ನಿರ್ಮಾಪಕರು ಈ ಬಗ್ಗೆ ಹೇಳಲಿದ್ದಾರೆ. ಒಮ್ಮೆ ಪ್ರಚಾರ ಆರಂಭವಾದರೆ ಎಲ್ಲವೂ ಗೊತ್ತಾಗುತ್ತದೆʼ ಎಂದು ಬರೆದಿದ್ದಾರೆ.

ನಿರ್ಮಾಪಕ ವಿಜಯ್‌ ಕಿರಗಂದೂರು ಈ ಬಗ್ಗೆ ಕೆಲವೇ ದಿನಗಳಲ್ಲಿ ಪ್ರಕಟಿಸಲಿದ್ದಾರೆ.

ADVERTISEMENT

ಯುವರತ್ನ ಚಿತ್ರದಲ್ಲಿ ಪುನೀತ್‌ ಅವರು ಕಾಲೇಜು ವಿದ್ಯಾರ್ಥಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪುನೀತ್‌ ಗಡ್ಡಬಿಟ್ಟು ನಿಂತಿರುವ ಚಿತ್ರ ಪೋಸ್ಟರ್‌ನಲ್ಲಿ ರಾರಾಜಿಸುತ್ತಿದೆ. ಚಿತ್ರದ ಪರಿಚಯಾತ್ಮಕ ಹಾಡಿನ ಚಿತ್ರೀಕರಣ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.