ಡಾ. ಪುನೀತ್ ರಾಜ್‌ಕುಮಾರ್
ಬೆಂಗಳೂರು: ದೊಡ್ಮನೆ ಮಗ, ಅಭಿಮಾನಿಗಳ ಪ್ರೀತಿಯ ಅಪ್ಪು, ಡಾ. ಪುನೀತ್ ರಾಜ್‌ಕುಮಾರ್ ಅವರು ನಮ್ಮನ್ನು ಆಗಲಿದ್ದರೂ, ಅವರ ನೆನಪುಗಳು ಸದಾ ಸ್ಮರಣೀಯ. ಅವರ ಅಭಿಮಾನಿಗಳಂತೂ ಅವರನ್ನು ಆರಾಧ್ಯ ದೇವರಂತೆ ಪೂಜಿಸುತ್ತ ಧ್ಯಾನಿಸುತ್ತಿದ್ದಾರೆ.
ಈ ನಡುವೆಯೇ ಅಪ್ಪು ಮತ್ತಷ್ಟು ಅಭಿಮಾನಿಗಳಿಗೆ ಹತ್ತಿರವಾಗುವಂತ ಹಾಡೊಂದನ್ನು ಪಿಆರ್‌ಕೆ ಸ್ಟುಡಿಯೋ ಹೊರತಂದಿದೆ. ಈ ಹಾಡು ಪುನೀತ್ ಅವರ ಬಾಲ್ಯದ ನೆನಪುಗಳಿಂದ ಹಿಡಿದು ವೃತ್ತಿ ಜೀವನದವರೆಗಿನ ಸನ್ನಿವೇಶಗಳ ಕುರಿತು ಸಂಗೀತ ಸಂಯೋಜನೆ ಮಾಡಲಾಗಿದ್ದು ಕೇಳುಗರ ಮನಸ್ಸಿಗೆ ಅಪ್ಪು ಅಮರ ಎನ್ನಿಸುವಂತಿದೆ.
'ಕೋಟಿ ಕನ್ನಡ ಉಸಿರ ಅಧಿಕಾರಿ ನೀನೆ, ನೀನೆ.. ನೀನೆ.. ರಾಜಕುಮಾರ ಎಂಬ ಸಾಲುಗಳ ಮೂಲಕ ಆರಂಭವಾಗುವ ಹಾಡು ಅಪ್ಪು ಜೀವಂತಕ್ಕೆ ಸಾಕ್ಷಿಯಾಗಿದೆ. ಸರಳ ವ್ಯಕ್ತಿತ್ವ, ಅಭಿಮಾನಿಗಳ ಬಗ್ಗೆ ಹೊಂದಿದ್ದ ಕಾಳಜಿ, ಸಿನಿ ಬದುಕಿನ ಉತ್ಸಾಹ, ಮಾನವೀಯತೆಯ ಪ್ರತಿರೂಪದ ವಿವರಿಸಿರುವ ಸಾಲುಗಳು ಹಾಡಿನಲ್ಲಿದೆ.
ಈ ಹಾಡಿಗೆ ಪವನ್ ಭಟ್ ಸಾಹಿತ್ಯವಿದ್ದು, ಸಂಗೀತ ಸಂಯೋಜನೆ ಹಾಗೂ ನಿರ್ದೇಶನವನ್ನು ಸುನಿಲ್ ಕೋಶಿ ಮಾಡಿದ್ದಾರೆ. ಈ ಹಾಡನ್ನು ಜಂಕಾರ್ ಮ್ಯೂಸಿಕ್ ಯುಟ್ಯೂಬ್‌ನಲ್ಲಿ ಬಿಡುಗಡೆ ಮಾಡಿದ್ದು, ಅಪ್ಪು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.