
‘ರಾಕ್ಷಸ’ ಪೋಸ್ಟರ್
‘ಅಯ್ಯನ ಮನೆ’, ‘ಮಾರಿಗಲ್ಲು’ ವೆಬ್‌ಸರಣಿ ಬಳಿಕ ಜೀ5 ಮತ್ತೊಂದು ಕನ್ನಡ ವೆಬ್‌ಸರಣಿಯನ್ನು ಘೋಷಿಸಿದೆ. ‘ರಾಕ್ಷಸ’ ಎಂಬ ಶೀರ್ಷಿಕೆಯ ಈ ವೆಬ್‌ಸರಣಿಯನ್ನು ನಿರ್ದೇಶಕ ತರುಣ್ ಸುಧೀರ್ ತಮ್ಮ ತರುಣ್ ಸುಧೀರ್ ಪ್ರೊಡಕ್ಷನ್ಸ್‌ನಡಿ ನಿರ್ಮಿಸಿದ್ದಾರೆ.
ಕ್ರೈಮ್ ಥ್ರಿಲ್ಲರ್ ಜಾನರ್‌ನಲ್ಲಿ ಇರುವ ಈ ವೆಬ್‌ಸರಣಿಯನ್ನು ಸುಹಾನ್ ಪ್ರಸಾದ್ ಹಾಗೂ ಅಪೂರ್ವ ಬರೆದಿದ್ದಾರೆ. ಸುಹಾನ್ ಪ್ರಸಾದ್ ನಿರ್ದೇಶನ ಮಾಡಿದ್ದಾರೆ. ನಟ ವಿಜಯ ರಾಘವೇಂದ್ರ ಇದರ ಮೂಲಕ ವೆಬ್‌ಸರಣಿ ಲೋಕಕ್ಕೆ ಕಾಲಿಡುತ್ತಿದ್ದಾರೆ. ಮಯೂರಿ, ಅವಿನಾಶ್, ಮಾಳವಿಕ, ಅಪ್ಪಣ್ಣ ಮತ್ತು ಅಭಿಜಿತ್ ತಾರಾಬಳಗದಲ್ಲಿದ್ದಾರೆ.
‘ಓರ್ವ ನಿರ್ಮಾಪಕನಾಗಿ ನಮ್ಮ ಮಣ್ಣಿನ, ತೀವ್ರತೆಯಿಂದ ಕೂಡಿದ ಭಾವನಾತ್ಮಕ ಕಥೆಯನ್ನು ಬೆಂಬಲಿಸಲು ಉತ್ಸುಕನಾಗಿದ್ದೆ. ಈ ಸಂದರ್ಭದಲ್ಲಿ ಈ ಕಥೆ ದೊರೆಯಿತು. ಗಟ್ಟಿಯಾದ ಬರವಣಿಗೆ ಕಥೆಯಿಲ್ಲಿದ್ದು, ಇದು ಉತ್ತರ ಕರ್ನಾಟಕದಲ್ಲಿ ನಡೆಯುವ ಘಟನೆಯ ಸುತ್ತ ಇದೆ’ ಎಂದಿದ್ದಾರೆ ತರುಣ್ ಸುಧೀರ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.