ADVERTISEMENT

ರಾಧಿಕಾ ಆಪ್ಟೆ | ನಟನೆಯಷ್ಟೇ ಅಲ್ಲ, ಮಾತೂ ಪ್ರಬುದ್ಧ

​ಪ್ರಜಾವಾಣಿ ವಾರ್ತೆ
Published 2 ಜೂನ್ 2019, 19:30 IST
Last Updated 2 ಜೂನ್ 2019, 19:30 IST
ರಾಧಿಕಾ ಆಪ್ಟೆ
ರಾಧಿಕಾ ಆಪ್ಟೆ   

ಬಾಲಿವುಡ್ ನಟಿ ರಾಧಿಕಾ ಆಪ್ಟೆ ಅವರು ತಮ್ಮ ಇತ್ತೀಚಿನ ಚಿತ್ರ ‘ಅಂಧಾಧುನ್’ ಹಾಗೂ ವೆಬ್ ಸರಣಿಯ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಚಿತ್ರಗಳಿಂದ ಸಾಕಷ್ಟು ಹೆಸರನ್ನೂ ಗಳಿಸಿರುವ ಅವರುಸಮಾರಂಭವೊಂದರಲ್ಲಿ ತಮ್ಮ ಖಾಸಗಿ ಹಾಗೂ ವೃತ್ತಿಪರ ಬದುಕನ್ನು ಬಿಚ್ಚಿಟ್ಟಿದ್ದಾರೆ.

ತಮ್ಮ ಪಾತ್ರಗಳು ಏಕೆ ವೈರುಧ್ಯದಿಂದ ಕೂಡಿರುತ್ತವೆ ಎಂಬುದಕ್ಕೆ ಅವರು ಉತ್ತರವನ್ನೂ ನೀಡಿದರು. ‘ನನ್ನ ಪಾತ್ರಗಳು ರೂಢಿಗಿಂತ ಭಿನ್ನವಾಗಿ, ಸಾದಾಸೀದಾ ನಟನೆಯನ್ನು ಬಯಸುತ್ತವೆ ಎಂದು ನನ್ನ ಅಭಿಮಾನಿಗಳು ಅಂದುಕೊಂಡಿದ್ದಾರೆ. ನನ್ನ ಪಾತ್ರಗಳು ಸಾಮಾನ್ಯ ನೆಲೆಯಲ್ಲೇ ಇವೆ. ನನ್ನ ಪಾತ್ರಗಳನ್ನು ಇಷ್ಟಪಡುವವರೇ ನನ್ನ ಸುತ್ತಲೂ ಇದ್ದಾರೆ’ ಎಂದು ಆಪ್ಟೆ ಹೇಳಿಕೊಂಡಿದ್ದಾರೆ.

‘ಮುಖ್ಯವಾಹಿನಿಯ ಸಿನಿಮಾಗಳಿಂದ ತಮ್ಮ ಪಾತ್ರಗಳು ಬೇರೆಯೇ ಆಗಿರುತ್ತವೆ. ನನ್ನ ಆಯ್ಕೆಯೇ ಅದಕ್ಕೆ ಕಾರಣ. ವೃತ್ತಿಪರತೆ ಇರುವ ಪಾತ್ರಗಳನ್ನು ಆಯ್ಕೆ ಮಾಡುಕೊಳ್ಳುತ್ತೇನೆ. ಹೀಗಾಗಿ ಬಾಲಿವುಡ್ ಸಿನಿಮಾಗಳ ಛಾಯೆಗಿಂತ ಅವು ಬೇರೆಯೇ ಆಗಿರುತ್ತವೆ’ ಎಂದಿದ್ದಾರೆ.

ADVERTISEMENT

ಆಪ್ಟೆ ಅವರ ಈ ಮುಕ್ತ ಮಾತುಕತೆಯನ್ನು ಕೇಳಿಸಿಕೊಂಡವರಿಗೆ ಅವರು ಇನ್ನಷ್ಟು ಪ್ರಭಾವಿ ನಟಿ ಎಂದು ಅನ್ನಿಸದೇ ಇರಲಿಲ್ಲ.

ಚೊಚ್ಚಲ ಸಿನಿಮಾದಿಂದಲೂ ಗಮನಿಸುತ್ತಾ ಹೋದರೆ, ಅವರ ಮಾತುಗಳಿಗಿಂತ ಅವರ ಪಾತ್ರಗಳು ಹೆಚ್ಚು ಪ್ರೌಢವಾಗಿ ಮಾತನಾಡಿವೆ. ಅವರ ನಟನೆಯ ‘ಅಂಧಾಧುನ್’ ಹಾಗೂ ‘ಪ್ಯಾಡ್ ಮ್ಯಾನ್’ ಸಿನಿಮಾಗಳು ಬಾಲಿವುಡ್‌ನ ಅಗ್ರಶ್ರೇಯದ ಪಟ್ಟಿಯಲ್ಲಿವೆ. ಅವರು ತೆರೆಯಲ್ಲಿ ಕಾಣಿಸಿಕೊಂಡ ಪಾತ್ರಗಳಂತೆಯೇ ಅವರ ಮಾತೂ ಹರಿತ.

ನವಾಜುದ್ದೀನ್ ಸಿದ್ಧಿಕಿ ಅವರ ಜೊತೆ ಮುಂದಿನ ಚಿತ್ರದಲ್ಲಿ ನಟಿಸುತ್ತಿರುವ ರಾಧಿಕಾ, ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.