ADVERTISEMENT

ವಿಡಿಯೊ: ತನ್ಮಯಳಾದೆನು ತಿಳಿಯುವ ಮುನ್ನವೇ –ರಾಧಿಕಾ ಕುಮಾರಸ್ವಾಮಿ 

​ಪ್ರಜಾವಾಣಿ ವಾರ್ತೆ
Published 2 ಮೇ 2022, 7:17 IST
Last Updated 2 ಮೇ 2022, 7:17 IST
ರಾಧಿಕಾ ಕುಮಾರಸ್ವಾಮಿ 
ರಾಧಿಕಾ ಕುಮಾರಸ್ವಾಮಿ    

ಚಂದನವನದ ತಾರೆ ರಾಧಿಕಾ ಕುಮಾರಸ್ವಾಮಿ ಮತ್ತೆ ಸಿನಿಮಾದಲ್ಲಿ ನಟಿಸುತ್ತಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಇದಕ್ಕೆ ಕಾರಣ, ರಾಧಿಕಾ ಇನ್‌ಸ್ಟಾಗ್ರಾಂನಲ್ಲಿ ಬಿಡುಗಡೆ ಮಾಡಿರುವ ವಿಡಿಯೊ! ಹೌದು,ರಾಧಿಕಾ ಕನ್ನಡದ ‘ಪರಮಾತ್ಮ‘ ಚಿತ್ರದ ರೊಮ್ಯಾಂಟಿಕ್‌ ಹಾಡಿಗೆ ಕಡಲತಡಿಯಲ್ಲಿ ರೀಲ್‌ ಮಾಡಿದ್ದಾರೆ. ಈ ವಿಡಿಯೊ ನೋಡಿರುವ ಅಭಿಮಾನಿಗಳು ರಾಧಿಕಾ ಮತ್ತೆ ಕನ್ನಡ ಸಿನಿಮಾಗೆ ಕಮ್‌ ಬ್ಯಾಕ್‌ ಮಾಡಲಿದ್ದಾರೆ ಎಂದು ಹೇಳುತ್ತಿದ್ದಾರೆ.

ಮುಸ್ಸಂಜೆ ಸಮಯದಲ್ಲಿ, ಚಲಿಸುವ ಬೋಟ್‌ನಲ್ಲಿ ರಾಧಿಕಾಸಿಂಪಲ್ ಗೌನ್ ತೊಟ್ಟು ‘ತನ್ಮಯಳಾದೆನು ತಿಳಿಯುವ ಮುನ್ನವೇ ‘ ಹಾಡಿಗೆ ರೀಲ್‌ ಮಾಡಿದ್ದಾರೆ. ಈ ವಿಡಿಯೊದಲ್ಲಿ ರಾಧಿಕಾ ಸುಂದರವಾಗಿ ಕಾಣುತ್ತಿದ್ದಾರೆ. ಇದಕ್ಕೆ ಅಭಿಮಾನಿಗಳು ಫಿದಾ ಆಗಿದ್ದು ಮತ್ತೆ ರಾಧಿಕಾ ಸಿನಿಮಾಗಳನ್ನು ಮಾಡಲಿ ಎಂದು ಕಾಮೆಂಟ್‌ ಹಾಕುತ್ತಿದ್ದಾರೆ.

ADVERTISEMENT

ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇರಲು ರಾಧಿಕಾ ಸಾಮಾಜಿಕ ಮಾಧ್ಯಗಳಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಅವರ ಹಿಂದಿನ ಡ್ಯಾನ್ಸ್‌ ವಿಡಿಯೊಗಳು ಸಹ ಸೂಪರ್ ಹಿಟ್‌ ಆಗಿದ್ದವು.

ರಾಧಿಕಾ ಹೊಸ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು ಅದರಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ ಎಂದು ಅವರ ಆಪ್ತರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.