ಚಂದನವನದ ನಟ ಯಶ್, ನಟಿ ರಾಧಿಕಾ ಪಂಡಿತ್ ದಂಪತಿ ಸಂಬಂಧಿಕರ ಮದುವೆ ಸಮಾರಂಭದಲ್ಲಿ ಭಾಗವಹಿಸಿದ್ದು ಅಲ್ಲಿನ ಫೋಟೊಗಳನ್ನು ಹಂಚಿಕೊಂಡಿದ್ದಾರೆ.
ರಾಧಿಕಾ ಪಂಡಿತ್ ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ಫೋಟೊಗಳನ್ನು ಶೇರ್ ಮಾಡಿದ್ದಾರೆ. ಯಶ್ ಮತ್ತು ರಾಧಿಕಾ ಅಭಿಮಾನಿಗಳು ಈ ಚಿತ್ರಗಳಿಗೆ ಲೈಕ್ ಮತ್ತು ಕಾಮೆಂಟ್ ಹಾಕುತ್ತಿದ್ದಾರೆ.
ಈ ಮದುವೆ ಕಾರ್ಯಕ್ರಮದಲ್ಲಿ ರಾಧಿಕಾ, ಯಶ್ ಮಕ್ಕಳಾದ ಆಯ್ರಾ ಹಾಗೂ ಯಥರ್ವ್ ಕೂಡ ಪಾಲ್ಗೊಂಡಿದ್ದರು. ಈ ಪುಟಾಣಿಗಳ ಫೋಟೊಗಳು ಅಭಿಮಾನಿಗಳಿಗೆ ಇಷ್ಟವಾಗಿವೆ.
ರಾಧಿಕಾ ಪಂಡಿತ್ ಹಳದಿ ಬಣ್ಣದ ಸೀರೆಯಲ್ಲಿ ಮಿಂಚಿದರೆ, ಯಶ್ ಕಪ್ಪು ಬಣ್ಣದ ಕುರ್ತಾತೊಟ್ಟಿದ್ದರು. ಆಯ್ರಾ ಹಾಗೂ ಯಥರ್ವ್ ಕೂಡ ಹೊಸ ಬಟ್ಟೆ ತೊಟ್ಟಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.