ADVERTISEMENT

ಕಪೂರ್ ಕುಟುಂಬದ ಕಣ್ಮಣಿ ರಾಹಾ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2024, 15:48 IST
Last Updated 16 ಫೆಬ್ರುವರಿ 2024, 15:48 IST
<div class="paragraphs"><p><strong>ಅಲಿಯಾ ಭಟ್‌–ರಣಬೀರ್‌ ಕಪೂರ್ ದಂಪತಿ ಮಗಳು ರಾಹಾ ಕಪೂರ್‌</strong></p></div>

ಅಲಿಯಾ ಭಟ್‌–ರಣಬೀರ್‌ ಕಪೂರ್ ದಂಪತಿ ಮಗಳು ರಾಹಾ ಕಪೂರ್‌

   

insta/ranbirfanbase

ಕಪೂರ್‌ ಖಾಂದಾನ್‌ ಕಣ್ಮಣಿ ರಾಹಾ ಕಪೂರ್‌ ಮತ್ತೊಮ್ಮೆ ಇನ್‌ಸ್ಟಾಗ್ರಾಂನಲ್ಲಿ ಎಲ್ಲರ ಗಮನಸೆಳೆದಿದ್ದಾಳೆ. ರಾಹಾ ಕಪೂರ್‌ ತನ್ನಜ್ಜ ರಿಷಿ ಕಪೂರ್‌ ತೋಳುಗಳ ಮೇಲೆ ಕುಳಿತಿರುವ ಫೋಟೊ ವೈರಲ್‌ ಆಗಿದೆ. ಈ ಫೋಟೊ ಎಡಿಟ್‌ ಮಾಡಿರುವ ವಿಡಿಯೊ ಅಭಿಮಾನಿಗಳಲ್ಲಿ ಪ್ರೀತಿಯಿಂದಲೇ ಹರಿದಾಡುತ್ತಿದೆ.

ADVERTISEMENT

2022ರ ನವೆಂಬರ್‌ನಲ್ಲಿ ಜನಿಸಿರುವ ರಾಹಾ ಚಿತ್ರವನ್ನು ಇತ್ತೀಚೆಗಷ್ಟೆ ರಣಬೀರ್‌ ಮತ್ತು ಆಲಿಯಾ ಪೋಸ್ಟ್‌ ಮಾಡಿದ್ದರು. ಆಗಿನಿಂದಲೂ ರಾಹಾ ಖಾನ್‌ ತನ್ನಜ್ಜ ರಿಷಿ ಕಪೂರ್‌ ಅನ್ನು ಹೋಲುತ್ತಾಳೆ ಎಂದು ಅಭಿಮಾನಿಗಳು ಎಕ್ಸ್‌ ವೇದಿಕೆಯಲ್ಲಿ ಪ್ರೀತಿಯನ್ನೇ ಹರಿಬಿಟ್ಟಿದ್ದರು.

ಈ ಹಿಂದೆ ರಾಹಾ ಚಿತ್ರ ಪೋಸ್ಟ್‌ ಮಾಡುವ ಮೊದಲು ರಣಬೀರ್‌ ಕಪೂರ್‌ ಕಪಿಲ್‌ ಶರ್ಮಾ ಶೋನಲ್ಲಿ ರಾಹಾ ಯಾರನ್ನು ಹೋಲುತ್ತಾರೆ ಎಂಬ ಬಗ್ಗೆ ದಿನವೂ ಜಿಜ್ಞಾಸೆ ನಡೆಯುತ್ತದೆ ಎಂದು ಹೇಳಿದ್ದರು. ಹಣೆ ಅಪ್ಪನಂಗೆ, ಮೂಗು ಅಮ್ಮನಂತೆ, ಕಣ್ಣು ಮುತ್ತಜ್ಜನಂತೆ, ತುಟಿ ಅಜ್ಜನನ್ನು ಹೋಲುತ್ತದೆ ಎಂದೆಲ್ಲ ಚರ್ಚೆಯಾಗುತ್ತದೆ. ಸದ್ಯ ಅವಳು ನಮ್ಮನ್ನೇ ಹೋಲುತ್ತಾಳೆ ಎಂದು ಹೇಳ್ತಾರಲ್ಲ.. ಅಷ್ಟೇ ಸಾಕು ಎಂದು ಉದ್ಗರಿಸಿದ್ದರು. 

ಕಾಫಿ ವಿತ್‌ ಕರಣ್‌ನಲ್ಲಿ ಸದ್ಯಕ್ಕೆ ನಮಗೆಲ್ಲ ಇರುವ ಪ್ರೀತಿಯ ಕೆಲಸವೆಂದರೆ ರಾಹಾಳನ್ನು ಸೋಫಾದಲ್ಲಿ ಕೂರಿಸಿ, ಅಮ್ಮ ಎಲ್ಲಿ.. ಅಪ್ಪ ಎಲ್ಲಿ, ಅಜ್ಜಿ ಎಲ್ಲಿ ಎಂಬ ಪ್ರಶ್ನೆಯನ್ನು ಕೇಳುವುದೇ ಆಗಿದೆ. ಅವಳು ಪ್ರತಿ ಸಲ ನಮ್ಮ ಕಡೆ ನೋಡಿದಾಗಲೆಲ್ಲ ಮನದೊಳೊಂದು ಪ್ರೀತಿಯ ಝರಿ ಉಕ್ಕುತ್ತದೆ ಎಂದಿದ್ದರು. ಕರೀನಾ ಕಪೂರ್‌ ಖಾನ್‌ ಜೊತೆಗೆ ಕಾಫಿ ವಿತ್‌ ಕರಣ್‌ ನಲ್ಲಿ ಕಾಣಿಸಿಕೊಂಡಿದ್ದ ಆಲಿಯಾ ತೈಮೂರ್‌ ಮತ್ತು ರಾಹಾಳ ಆಟಗಳ ಕುರಿತೂ ನೆನಪಿಸಿಕೊಂಡಿದ್ದರು.

ರಣಬೀರ್‌ ಕಪೂರ್‌ ರಾಹಾ ಅವರನ್ನು ಎತ್ತಿಕೊಂಡಿರುವ ಚಿತ್ರ, ನೀತು ಕಪೂರ್‌ ಮತ್ತು ರಿಷಿ ಕಪೂರ್‌ ಇರುವ ಚಿತ್ರಗಳನ್ನು ಎಡಿಟ್‌ ಮಾಡಿ ಈ ಚಿತ್ರವನ್ನು ಮಾಡಿರುವುದಾಗಿ ಎಡಿಟ್‌ವಿತ್‌ ಅನುಜ್‌ ಅಕೌಂಟಿನ ವ್ಯಕ್ತಿ ಹೇಳಿಕೊಂಡಿದ್ದಾನೆ. ಇದರದ್ದೊಂದು ವಿಡಿಯೊವನ್ನೂ ಅಪ್‌ಲೋಡ್‌ ಮಾಡಿದ್ದು, ಸುಮಾರು ಜನ ನೀತುಕಪೂರ್‌ ಅವರನ್ನು ಟ್ಯಾಗ್‌ ಮಾಡಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.