ADVERTISEMENT

ರಾಜಕುಮಾರ್ ಅಸ್ಕಿ ನಿರ್ದೇಶನದ ‘ರಂಗಸಮುದ್ರ’ ಚಿತ್ರೀಕರಣ ಮುಕ್ತಾಯ

​ಪ್ರಜಾವಾಣಿ ವಾರ್ತೆ
Published 24 ಜುಲೈ 2022, 9:18 IST
Last Updated 24 ಜುಲೈ 2022, 9:18 IST
‘ರಂಗಸಮುದ್ರ’ದಲ್ಲಿ ರಂಗಾಯಣ ರಘು
‘ರಂಗಸಮುದ್ರ’ದಲ್ಲಿ ರಂಗಾಯಣ ರಘು   

ಹೊಯ್ಸಳ ಕ್ರಿಯೇಷನ್ಸ್‌ನಿಂದ ಕೆ.ಆರ್. ಹೊಯ್ಸಳ ನಿರ್ಮಿಸುತ್ತಿರುವ ‘ರಂಗಸಮುದ್ರ’ ಚಿತ್ರದ ಚಿತ್ರೀಕರಣ ಇತ್ತೀಚೆಗೆ ಮುಕ್ತಾಯವಾಗಿದೆ. ಶೇ. 85ರಷ್ಟು ಚಿತ್ರೀಕರಣ ರಾಜ್ಯದ ವಿವಿಧೆಡೆಗಳಲ್ಲಿ ನಡೆದಿದೆ. ಬೆಂಗಳೂರು ಹೊರವಲಯದ ವಿದ್ಯಾನಗರದಲ್ಲಿ ಚಿತ್ರದ ಅಂತಿಮ ಹಂತದ ಪೂರಕ ಸನ್ನಿವೇಶಗಳನ್ನು ನಿರ್ದೇಶಕ ರಾಜಕುಮಾರ್ ಅಸ್ಕಿ ನಿರ್ದೇಶನದಲ್ಲಿ ಹಿರಿಯ ಛಾಯಾಗ್ರಾಹಕ ಗಿರಿ ಚಿತ್ರೀಕರಿಸಿಕೊಂಡರು.

ರಂಗಾಯಣ ರಘು, ಸಂಪತ್ ರಾಜ್, ಕರಾವಳಿಯ ಕೆವಿಆರ್ ಮತ್ತು ದಿವ್ಯಾ ಗೌಡ, ಗುರುರಾಜ್ ಹೊಸಕೋಟೆ ಮೋಹನ್ ಜುನೇಜ, ಮೂಗು ಸುರೇಶ್, ಉಗ್ರಂ ಮಂಜು, ಸ್ಕಂದ ತೇಜಸ್, ಡ್ರಾಮಾ ಜ್ಯೂನಿಯರ್ ಮಹೇಂದ್ರ ಮತ್ತಿತರರು ಚಿತ್ರದ ಭೂಮಿಕೆಯಲ್ಲಿದ್ದಾರೆ. ಚಿತ್ರದ ಪ್ರಮುಖ ದೃಶ್ಯಕ್ಕೆ ಅಂತಿಮ ಹಂತದ ಚಿತ್ರೀಕರಣ ಕಳೆದ ಅಕ್ಟೋಬರ್‌ನಲ್ಲಿ ನಡೆಯಬೇಕಿತ್ತು. ಇದಕ್ಕಾಗಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಚಿತ್ರತಂಡ ಸಂಪರ್ಕಿಸಿತ್ತು. ಆದರೆ ವಿಧಿ ಅವರನ್ನು ಹಠಾತ್ ಸೆಳೆದೊಯ್ದಿತ್ತು. ಈ ಘಟನೆಯಿಂದ ಚಿತ್ರತಂಡ ಶಾಕ್ ಗೆ ಒಳಗಾಗಿತ್ತು. ಇದೀಗ ಇನ್ನೊಬ್ಬರು ಸ್ಟಾರ್ ನಟರು ಆ ದೃಶ್ಯದಲ್ಲಿ ನಟಿಸಿದ್ದಾರೆ. ಆ ನಟ ಯಾರು ಎಂಬ ಗುಟ್ಟನ್ನು ಚಿತ್ರತಂಡ ಬಹಿರಂಗಪಡಿಸಿಲ್ಲ.

ಚಿತ್ರಕ್ಕೆ ದೇಸೀ ಮೋಹನ್ ಸಂಗೀತ ನೀಡಿದ್ದಾರೆ. ಸಂಕಲನ ಶ್ರೀಕಾಂತ್, ವಾಗೀಶ್ ಚನ್ನಗಿರಿ ಗೀತ ಸಾಹಿತ್ಯ ನೀಡಿದ್ದಾರೆ. ಚಿತ್ರದ ಹಾಡುಗಳಿಗೆ ಖ್ಯಾತ ಗಾಯಕರಾದ ಕೈಲಾಶ್ ಖೇರ್, ಕೀರವಾಣಿ, ವಿಜಯ್ ಪ್ರಕಾಶ್, ಸಂಜಿತ್ ಹೆಗ್ಡೆ ಧ್ವನಿಯಾಗಿದ್ದಾರೆ. ಶೀಘ್ರದಲ್ಲಿಯೇ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕ ಕೆ.ಆರ್.ಹೊಯ್ಸಳ ಅವರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.