ADVERTISEMENT

ಆರೋಗ್ಯ ತಪಾಸಣೆ: ಅಮೆರಿಕಗೆ ತೆರಳಿದ ರಜನಿಕಾಂತ್‌ ದಂಪತಿ

​ಪ್ರಜಾವಾಣಿ ವಾರ್ತೆ
Published 19 ಜೂನ್ 2021, 7:40 IST
Last Updated 19 ಜೂನ್ 2021, 7:40 IST
 ರಜನಿಕಾಂತ್
ರಜನಿಕಾಂತ್   

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಪತ್ನಿ ಲತಾ ಶುಕ್ರವಾರ ತಡ ರಾತ್ರಿ ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಮೆರಿಕಗೆ ಪ್ರಯಾಣ ಬೆಳೆಸಿದರು.

ಆರೋಗ್ಯ ತಪಾಸಣೆಗಾಗಿರಜನಿಕಾಂತ್ ಮತ್ತು ಲತಾ ಅಮೆರಿಕಗೆ ತೆರಳಿದರು ಎಂದು ಅವರ ಆಪ್ತರು ಖಚಿತಪಡಿಸಿದ್ದಾರೆ. ಚೆನ್ನೈನಿಂದದೋಹಾ ಮಾರ್ಗವಾಗಿ ರಜನಿ ದಂಪತಿ ಅಮೆರಿಕತಲುಪಲಿದ್ದಾರೆ. ರಜನಿ ಮತ್ತು ಲತಾ ಚೆನ್ನೈನ ಅಂತರರಾಷ್ಟ್ರೀಯ ವಿಮಾನದಲ್ಲಿ ಕಾಣಿಸಿಕೊಂಡಿರುವ ಚಿತ್ರ ಹಾಗೂ ವಿಡಿಯೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.

ರಜನಿಕಾಂತ್‌ ಕೆಲವು ವರ್ಷಗಳ ಹಿಂದೆ ಮೂತ್ರಪಿಂಡ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು.ಕಳೆದ ಡಿಸೆಂಬರ್‌ನಲ್ಲಿ ಅಣ್ಣಾತೆ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ರಜನಿ ಅನಾರೋಗ್ಯಕ್ಕೆ ತುತ್ತಾಗಿದ್ದರು. ಈ ಹಿನ್ನೆಲೆಯಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆಗಾಗಿ ಅಮೆರಿಕಗೆ ತೆರಳಿದರುಎನ್ನಲಾಗಿದೆ

ADVERTISEMENT

ಅಮೆರಿಕಗೆ ತೆರಳಲು ರಜನಿಕಾಂತ್‌ ಕೇಂದ್ರ ಸರ್ಕಾರದಿಂದ ವಿಶೇಷ ಅನುಮತಿ ಪಡೆದಿದ್ದಾರೆ.ಸದ್ಯ ರಜನಿಕಾಂತ್‌ ಅಣ್ಣಾತೆ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.ಸನ್ ಪಿಕ್ಚರ್ಸ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ.ಸಿರುಥೈ ಶಿವಾ ನಿರ್ದೇಶನದ ಈ ಚಿತ್ರದಲ್ಲಿ ನಯನಾ ತಾರ, ಮೀನಾ, ಖುಷ್ಬೂ, ಪ್ರಕಾಶ್‌ ರೈ ನಟಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.