ADVERTISEMENT

ಹೀಗಿದೆ ಮನು–ಪ್ರಿಯಾ ಜೋಡಿ!

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2021, 15:29 IST
Last Updated 30 ಮಾರ್ಚ್ 2021, 15:29 IST
ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಕಾರ್ಯಾಗಾರದಲ್ಲಿ ನಟ ರಕ್ಷಿತ್‌ ಶೆಟ್ಟಿ ಹಾಗೂ ನಟಿ ರುಕ್ಮಿಣಿ ವಸಂತ್‌
ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಕಾರ್ಯಾಗಾರದಲ್ಲಿ ನಟ ರಕ್ಷಿತ್‌ ಶೆಟ್ಟಿ ಹಾಗೂ ನಟಿ ರುಕ್ಮಿಣಿ ವಸಂತ್‌   

ಬೆಂಗಳೂರು: ನಟ ರಕ್ಷಿತ್‌ ಶೆಟ್ಟಿ ಹಾಗೂ ನಟಿ ರುಕ್ಮಿಣಿ ವಸಂತ್‌ ನಾಯಕ–ನಾಯಕಿಯಾಗಿ ಅಭಿನಯಿಸಲಿರುವ ‘ಸಪ್ತ ಸಾಗರದಾಚೆ ಎಲ್ಲೋ’ ಚಿತ್ರದ ಚಿತ್ರೀಕರಣಕ್ಕೆ ಪೂರ್ವ ಸಿದ್ಧತೆ ನಡೆಯುತ್ತಿದ್ದು, ಚಿತ್ರದ ಕಾರ್ಯಾಗಾರ ಆರಂಭವಾಗಿದೆ.

ನಾಯಕ ಮತ್ತು ನಾಯಕಿಯ ನಡುವಿನ ತೆರೆಯ ಮೇಲಿನ ಕೆಮೆಸ್ಟ್ರಿ ಮತ್ತಷ್ಟು ಹೆಚ್ಚಿಸುವ ಸಲುವಾಗಿ, ನಿರ್ದೇಶಕ ಹೇಮಂತ್‌ ರಾವ್‌ ಈ ಕಾರ್ಯಾಗಾರ ನಡೆಸುತ್ತಿದ್ದಾರೆ. ಏಪ್ರಿಲ್‌ನಲ್ಲಿ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಇದೊಂದು ಪ್ರೇಮಕಥೆಯಾಗಿದ್ದು, ಹಲವು ವರ್ಷದ ಪ್ರೀತಿಯ ಬಳಿಕ ಮದುವೆಯ ಸನ್ನಿವೇಶದಿಂದ ಚಿತ್ರದ ಆರಂಭವಾಗಲಿದೆ. ಹೀಗಾಗಿ ನಾಯಕ ಮತ್ತು ನಾಯಕಿಯ ನಡುವಿನ ಹೊಂದಾಣಿಕೆಯನ್ನು ಹೆಚ್ಚಿಸಲು ಕಾರ್ಯಾಗಾರದಲ್ಲಿ ಪ್ರಯತ್ನಿಸಲಾಗಿದೆ.

ರಕ್ಷಿತ್‌ ಹಾಗೂ ರುಕ್ಮಿಣಿ ವಸಂತ್‌ ಅವರು ಜೊತೆಜೊತೆಯಾಗಿ ಅಡುಗೆ ಮಾಡುತ್ತಿರುವ, ಹಲವು ಬಗೆಯ ಆಟಗಳನ್ನು ಆಡುತ್ತಿರುವ, ಒಟ್ಟಿಗೆ ಹಾಡು ಕೇಳುತ್ತಿರುವ ಫೋಟೊಗಳನ್ನು ಹೇಮಂತ್‌ ರಾವ್‌ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಚಿತ್ರದಲ್ಲಿಚಿತ್ರದಲ್ಲಿ ಎರಡು ಶೇಡ್‌ಗಳಲ್ಲಿ ರಕ್ಷಿತ್‌ ಕಾಣಿಸಿಕೊಳ್ಳಲಿದ್ದಾರೆ. 70 ದಿನ ಚಿತ್ರೀಕರಣವಿರಲಿದ್ದು, ಮೇ 15 ಒಳಗೆ ಮೊದಲ ಶೆಡ್ಯೂಲ್‌ ಮುಗಿಯಲಿದೆ. ಜೂನ್‌.15ಕ್ಕೆ ಎರಡನೇ ಹಂತದ ಚಿತ್ರೀಕರಣ ಪ್ರಾರಂಭವಾಗಲಿದ್ದು, ಜುಲೈ ಅಂತ್ಯಕ್ಕೆ ಚಿತ್ರೀಕರಣ ಮುಗಿಯಲಿದೆ ಎಂದು ಈ ಹಿಂದೆ ಚಿತ್ರತಂಡ ತಿಳಿಸಿತ್ತು.

ADVERTISEMENT

ಬೆಂಗಳೂರು, ಮಂಗಳೂರು ಹಾಗೂ ಶಿವಮೊಗ್ಗದಲ್ಲಿ ಚಿತ್ರೀಕರಣ ನಡೆಯಲಿದ್ದು, ಮೊದಲಾರ್ಧದ ಪಾತ್ರಕ್ಕಾಗಿ ರಕ್ಷಿತ್‌ ಶೆಟ್ಟಿ ಸುಮಾರು 15 ಕೆ.ಜಿವರೆಗೆ ತೂಕ ಇಳಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.