ರಾಮ್ ಚರಣ್
ರಾಮ್ ಚರಣ್ ಟ್ವಿಟರ್ ಚಿತ್ರ
ನವದೆಹಲಿ: ತೆಲುಗಿನ ಖ್ಯಾತ ನಟ ರಾಮ್ ಚರಣ್, ಶಿವ ರಾಜ್ ಕುಮಾರ್ ಅಭಿನಯದ ‘ಪೆದ್ದಿ’ ಚಿತ್ರ ಮುಂದಿನ ವರ್ಷ ಮಾರ್ಚ್ 27ಕ್ಕೆ ಬಿಡುಗಡೆಯಾಗಲಿದೆ.
‘ಆರ್‌ಆರ್‌ಆರ್’, ‘ಎವಡು’, ‘ಮಗಧೀರ’ ಮತ್ತು ’ಧ್ರುವ’ ಮುಂತಾದ ಚಿತ್ರಗಳ ಮೂಲಕ ಖ್ಯಾತರಾಗಿರುವ ನಟ ಭಾನುವಾರ ರಾಮ ನವಮಿಯ ಸಂದರ್ಭದಲ್ಲಿ ಈ ಘೋಷಣೆ ಮಾಡಿದ್ದಾರೆ.
‘ಪೆದ್ದಿ’ ಚಿತ್ರವನ್ನು ಬುಚಿ ಬಾಬು ಸನಾ ನಿರ್ದೇಶಿಸಿದ್ದಾರೆ. ವೃದ್ಧಿ ಸಿನಿಮಾಸ್ ಬ್ಯಾನರ್ ಅಡಿಯಲ್ಲಿ ಮೈತ್ರಿ ಮೂವಿ ಮೇಕರ್ಸ್ ಮತ್ತು ಸುಕುಮಾರ್ ರೈಟಿಂಗ್ಸ್ ಪ್ರಸ್ತುತಪಡಿಸಿದ್ದಾರೆ.
‘ಪೆಡ್ಡಿಫಸ್ಟ್‌ಶಾಟ್ ಹ್ಯಾಪಿ ಶ್ರೀ ರಾಮ ನವಮಿ, 2026ರ ಮಾರ್ಚ್ 27ರಂದು ಚಿತ್ರಮಂದಿರಗಳಲ್ಲಿ ನಿಮ್ಮ ಮುಂದೆ’ಎಂದು ಚರಣ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
‘ಪೆದ್ದಿ’ ಚಿತ್ರದ 1.05 ನಿಮಿಷಗಳ ಮೊದಲ ಶಾಟ್‌ನಲ್ಲಿ ನಟ ಕ್ರಿಕೆಟ್ ಬ್ಯಾಟ್ ಹಿಡಿದು ಚೆಂಡನ್ನು ಪಾರ್ಕ್‌ನಿಂದ ಹೊರಗೆ ಚೆಂಡನ್ನು ಹೊಡೆಯುವುದನ್ನು ಕಾಣಬಹುದಾಗಿದೆ.
‘ಪೆಡ್ಡಿ’ ಚಿತ್ರದಲ್ಲಿ ಜಾಹ್ನವಿ ಕಪೂರ್, ಶಿವ ರಾಜ್ ಕುಮಾರ್, ಜಗಪತಿ ಬಾಬು ಮತ್ತು ದಿವ್ಯೆಂದು ನಟಿಸಿದ್ದಾರೆ.
ವೆಂಕಟ ಸತೀಶ್ ಕಿಲಾರು ಚಿತ್ರವನ್ನು ನಿರ್ಮಿಸಿದ್ದಾರೆ. ಎ.ಆರ್. ರೆಹಮಾನ್ ಸಂಗೀತ, ಆರ್. ರತ್ನವೇಲು ಛಾಯಾಗ್ರಹಣ, ಅವಿನಾಶ್ ಕೊಲ್ಲಾ ನಿರ್ಮಾಣ ವಿನ್ಯಾಸ ಮತ್ತು ನವೀನ್ ನೂಲಿ ಸಂಕಲನ ಮಾಡಿದ್ದಾರೆ.
ರಾಮ್ ಚರಣ್ ಇತ್ತೀಚೆಗೆ ಎಸ್. ಶಂಕರ್ ನಿರ್ದೇಶನದ ‘ಗೇಮ್ ಚೇಂಜರ್’ನಲ್ಲಿ ಕಾಣಿಸಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.