ADVERTISEMENT

ಮೊದಲ ದಿನವೇ ₹186 ಕೋಟಿ ಗಳಿಸಿದ ನಟ ರಾಮ್‌ ಚರಣ್‌ ಅಭಿನಯದ ‘ಗೇಮ್‌ ಚೇಂಜರ್‌’

ಪಿಟಿಐ
Published 11 ಜನವರಿ 2025, 10:22 IST
Last Updated 11 ಜನವರಿ 2025, 10:22 IST
   

ನವದೆಹಲಿ: ನಟ ರಾಮ್‌ ಚರಣ್‌ ಅಭಿನಯಿಸಿರುವ ತೆಲುಗು ಚಿತ್ರ ‘ಗೇಮ್‌ ಚೇಂಜರ್‌’ ಬಿಡುಗಡೆಯಾದ ಮೊದಲ ದಿನವೇ ಜಾಗತಿಕ ಬಾಕ್ಸ್‌ ಆಫೀಸ್‌ನಲ್ಲಿ ₹186 ಕೋಟಿ ಗಳಿಸಿದೆ ಎಂದು ನಿರ್ಮಾಣ ಸಂಸ್ಥೆ ತಿಳಿಸಿದೆ.

ಈ ಕುರಿತು ಪ್ರೊಡಕ್ಷನ್‌ ಬ್ಯಾನರ್‌ ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್‌, ಸಾಮಾಜಿಕ ಮಾಧ್ಯಮ ‘ಎಕ್ಸ್‌’ ಖಾತೆಯಲ್ಲಿ ಸಿನಿಮಾದ ಒಂದು ದಿನದ ಬಾಕ್ಸ್‌ ಆಫೀಸ್‌ ಗಳಿಕೆಯನ್ನು ಹಂಚಿಕೊಂಡಿದೆ.

ಗೇಮ್‌ ಚೇಂಜರ್‌ ಬಾಕ್ಸ್‌ ಆಫೀಸ್‌ನಲ್ಲಿ ಅದ್ದೂರಿ ತೆರೆ ಕಂಡಿದ್ದು, ಮೊದಲ ದಿನವೇ ವಿಶ್ವದಾದ್ಯಂತ ₹186 ಕೋಟಿ ಗಳಿಸಿದೆ ಎಂದು ನಿರ್ಮಾಣ ಸಂಸ್ಥೆ ಪೋಸ್ಟ್‌ ಮಾಡಿದೆ.

ADVERTISEMENT

ಗೇಮ್‌ ಚೇಂಜರ್‌ ಚಿತ್ರದಲ್ಲಿ ನಟ ರಾಮ್‌ ಚರಣ್‌, ನಿವೃತ್ತ ಐಪಿಎಸ್‌ ಅಧಿಕಾರಿ ರಾಮ್‌ ನಂದನ್‌ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ನಟಿ ಕಿಯಾರಾ ಅಡ್ವಾಣಿ, ಅಂಜಲಿ, ಎಸ್‌.ಜೆ.ಸೂರ್ಯ, ಶ್ರೀಕಾಂತ್‌, ಸುನೀಲ್‌, ಜಯರಾಮ್‌ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಇಂಡಿಯನ್‌, ಅನ್ನಿಯನ್‌, ಎಂಥಿರನ್‌ ಮತ್ತು 2.0 ಸಿನಿಮಾ ಖ್ಯಾತಿಯ ಎಸ್‌.ಶಂಕರ್‌ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ದಿಲ್ ರಾಜು ಚಿತ್ರ ನಿರ್ಮಿಸಿದ್ದಾರೆ.

ಗೇಮ್‌ ಚೇಂಜರ್‌ ಸಿನಿಮಾ ನಿನ್ನೆ (ಜನವರಿ 10) ವಿಶ್ವದಾದ್ಯಂತ ತೆರೆಕಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.