ADVERTISEMENT

‘ಶಿವಾಜಿ ಸುರತ್ಕಲ್‌’ನ ಮಗಳು ಬಂದಳು

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2022, 7:58 IST
Last Updated 2 ಏಪ್ರಿಲ್ 2022, 7:58 IST
ಆರಾಧ್ಯ, ರಮೇಶ್‌ ಅರವಿಂದ್‌
ಆರಾಧ್ಯ, ರಮೇಶ್‌ ಅರವಿಂದ್‌   

ರಮೇಶ್‌ ಅರವಿಂದ್‌ ಅಭಿನಯದಶಿವಾಜಿ ಸುರತ್ಕಲ್-2 ಚಿತ್ರದಲ್ಲಿ ಶಿವಾಜಿ (ರಮೇಶ್‌ ಅರವಿಂದ್‌)ಯ ಮಗಳ ಪಾತ್ರದಲ್ಲಿ ಆರಾಧ್ಯ ಬಂದಿದ್ದಾಳೆ. ಅಪ್ಪ– ಮಗಳು ಭಾರತ ಕ್ರಿಕೆಟ್‌ ತಂಡದ ಜೆರ್ಸಿ ಧರಿಸಿದ್ದಾರೆ. ಆರಾಧ್ಯ ಬ್ಯಾಟ್‌ ಹಿಡಿದು ನಿಂತಿದ್ದಾಳೆ. ಮುಂದೆ ಅಪ್ಪ ಮಗಳ ಬಾಂಧವ್ಯದ ಕಥೆ ಚಿತ್ರದಲ್ಲಿ ಇದೆಯಂತೆ.

ಚಿತ್ರದ ಶೇ 75 ಭಾಗ ಚಿತ್ರೀಕರಣ ಮುಗಿದಿದೆ. ಹಾಡುಗಳ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ. ರಾಧಿಕಾ ನಾರಾಯಣ್, ತಮಿಳು ತೆಲುಗು ಖ್ಯಾತಿಯ ನಾಸರ್, ರಾಘು ರಮಣಕೊಪ್ಪ, ವೀಣಾ ಸುಂದರ್, ಸುಮಂತ್ ಭಟ್ ಇವರೂ ಕೂಡ ತಾರಾಗಣದಲ್ಲಿದ್ದಾರೆ. ಅಂಜನಾದ್ರಿ ಸಿನಿ ಕ್ರಿಯೇಷನ್ಸ್ ಬ್ಯಾನರ್ ಅಡಿಯಲ್ಲಿ ಶಿವಾಜಿ ಸುರತ್ಕಲ್-2 ಚಿತ್ರವು ನಿರ್ಮಾಣವಾಗುತ್ತಿದೆ. ಆಕಾಶ್ ಶ್ರೀವತ್ಸ ಅವರು ನಿರ್ದೇಶಕರು. ರೇಖಾ ಕೆ.ಎನ್. ಮತ್ತು ಅನೂಪ್ ಗೌಡ ನಿರ್ಮಾಪಕರು.

ADVERTISEMENT

ಶಿವಾಜಿ ಸುರತ್ಕಲ್‌–1 ಕೂಡಾ ಪತ್ತೆಧಾರಿ ಕಥೆಯಿಂದಾಗಿ ಪ್ರೇಕ್ಷಕರ ಮೆಚ್ಚುಗೆ ಗಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.