
ತೆಲುಗು ನಟ ವಿಜಯ್ ದೇವರಕೊಂಡ ಹಿಟ್ ನಿರೀಕ್ಷೆಯಲ್ಲಿದ್ದಾರೆ. 2018ರಲ್ಲಿ ತೆರೆಕಂಡ ‘ಗೀತ ಗೋವಿಂದಂ’ ಬಳಿಕ ಅವರ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಬಾಕ್ಸ್ ಆಫೀಸ್‌ನಲ್ಲಿ ಸದ್ದು ಮಾಡಿಲ್ಲ. ಇದೀಗ ವಿಜಯ್ ದೇವರಕೊಂಡ–ರಶ್ಮಿಕಾ ಮಂದಣ್ಣ ನಟನೆಯ ಹೊಸ ಸಿನಿಮಾದ ಶೀರ್ಷಿಕೆ ಘೋಷಣೆಯಾಗಿದ್ದು, ಸಾಕಷ್ಟು ನಿರೀಕ್ಷೆ ಇದರ ಮೇಲಿದೆ.
ಈ ಹಿಂದೆ ‘ಗೀತ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೇಡ್’ನಲ್ಲಿ ವಿಜಯ್ ಜೊತೆ ರಶ್ಮಿಕಾ ನಟಿಸಿದ್ದರು. ಈಗ ‘ರಣಬಾಲಿ’ಯಲ್ಲಿ ಮತ್ತೊಮ್ಮೆ ಈ ಜೋಡಿ ತೆರೆ ಮೇಲೆ ಬರಲಿದೆ. ವಿಜಯ್ 14ನೇ ಸಿನಿಮಾ ಇದಾಗಿದೆ. ‘19ನೇ ಶತಮಾನದಲ್ಲಿ ಬ್ರಿಟಿಷರ ದೌರ್ಜನ್ಯದ ಮೇಲೆ ಬೆಳಕು ಚೆಲ್ಲುವುದಲ್ಲದೆ, ಭಾರತದಲ್ಲಿ ನಡೆದ ಆರ್ಥಿಕ ಶೋಷಣೆಯ ಉಲ್ಲೇಖವೂ ಚಿತ್ರದಲ್ಲಿದೆ’ ಎಂದಿದೆ ಚಿತ್ರತಂಡ. ಸಿನಿಮಾಗೆ ರಾಹುಲ್ ಸಂಕ್ರಿತ್ಯಾನ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ರಾಹುಲ್ ಈ ಹಿಂದೆ ‘ಟ್ಯಾಕ್ಸಿವಾಲಾ’ ಹಾಗೂ ‘ಶ್ಯಾಮ್ ಸಿಂಗ್ ರಾಯ್’ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ.
‘ಜಯಮ್ಮ’ ಪಾತ್ರದಲ್ಲಿ ರಶ್ಮಿಕಾ ಮಂದಣ್ಣ, ‘ದಿ ಮಮ್ಮಿ’ ಖ್ಯಾತಿಯ ಅರ್ನಾಲ್ಡ್ ವೊಸ್ಲೂ ಅವರು ‘ಸರ್ ಥಿಯೋಡರ್ ಹೆಕ್ಟರ್’ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಡಿಯರ್ ಕಾಮ್ರೇಡ್’ ಮತ್ತು ‘ಖುಷಿ’ ಸಿನಿಮಾ ಬಳಿಕ ಮೈತ್ರಿ ಮೂವೀ ಮೇಕರ್ಸ್ ಈ ಸಿನಿಮಾಗೆ ಹಣ ಹೂಡುತ್ತಿದೆ. ಇದೇ ವರ್ಷ ಸೆಪ್ಟೆಂಬರ್ 11ರಂದು ‘ರಣಬಾಲಿ’ ಸಿನಿಮಾ ಬಿಡುಗಡೆಯಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.